ಕಾರ್ಕಳ: ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ ಇದರ ತಿಂಗಳ ಕಾರ್ಯಕ್ರಮದಲ್ಲಿ 2024ನೇ ಸಾಲಿನಲ್ಲಿ ಪ್ರಕಟವಾದ ಜಾಗೃತಿಯ ಸದಸ್ಯೆಯರ ಕೃತಿಗಳ ಅವಲೋಕನ ಬೋರ್ಡ್ ಹೈಸ್ಕೂಲ್ಇದರ ಸಭಾಂಗಣದಲ್ಲಿ ನೆರವೇರಿತು.
2024ನೇ ವರ್ಷದಲ್ಲಿ ಪ್ರಕಟವಾದ ಕೃತಿಗಳ ಲೇಖಕರು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ಸಾವಿತ್ರಿ ಮನೋಹರ್ ರವರು ತಮ್ಮ “ಪಂಚ ಪ್ರಹಸನಗಳು” ಕೃತಿಯ ರಚನೆಗೆ ಪ್ರೇರಣೆ ನೀಡಿದ ಘಟನೆಗಳನ್ನು ಹಂಚಿಕೊAಡರು. ಅನುಪಮಾ ಚಿಪ್ಲೂಂಣಕರ್ ರವರು ತಮ್ಮ “ಅಮ್ಮ”ಕೃತಿಯ ಬಗ್ಗೆ ತಾಯಿಯ ಪ್ರೀತಿಯ ಅನುಬಂಧವನ್ನು ಮೆಲುಕು ಹಾಕಿದರು. ಶೈಲಜಾ ಹೆಗ್ಡೆಯವರು ತಮ್ಮ “ಭಾವ ಲಹರಿ”ಕೃತಿಯ ಬಿಡುಗಡೆಯ ಅವಿಸ್ಮರಣೀಯ ಅನುಭವವನ್ನು ಬಿಚ್ಚಿಟ್ಟರು.ಡಾ.ಸುಮತಿ ಪಿ .ಯವರು ತಮ್ಮ “ಚಿಗುರ ಸೊಬಗು” ಮತ್ತು “ಮೌನ ವೀಣೆ ಕೃತಿಯ ಹುಟ್ಟಿನ ಪ್ರೇರಣೆಗಳ ಬಗ್ಗೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ ಇದರ ಅಧ್ಯಕ್ಷೆ ಪ್ರೊ.ಮಿತ್ರಪ್ರಭಾ ಹೆಗ್ಡೆಯವರು ಮಾತನಾಡಿ ,ಇಂದಿನ ಬದುಕಿನಲ್ಲಿ ಸಾಹಿತ್ಯ ರಚನೆಗಳಿಗೆ ಬಹಳಷ್ಟು ವೇದಿಕೆಗಳ ಮೂಲಕ ಪ್ರೋತ್ಸಾಹ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿಗಳು ಸದಸ್ಯೆಯರಿಂದ ಬಿಡುಗಡೆ ಆಗಲಿ ಎಂದು ಶುಭ ಹಾರೈಸಿದರು.
,
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಸದಸ್ಯೆ ಸುಲೋಚನ ಬಿ .ವಿ ಸ್ವಾಗತಿಸಿ, ನಿರೂಪಿಸಿದರು. ರೂಪಾ ಚಿಪ್ಲೂಂಣಕರ್ ಪ್ರಾರ್ಥಿಸಿ, ಸುಲೋಚನರು ಧನ್ಯವಾದವನ್ನಿತ್ತರು.