Share this news

ಹೆಬ್ರಿ : ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಇವರ ಆಶ್ರಯದಲ್ಲಿ, ದಿ ಆರ್ಟ್ ಆಫ್ ಲಿವಿಂಗ್ ಆನಂದ ಉತ್ಸವ ಇದರ ಶಿಕ್ಷಕಿ ಕಾಸರಗೋಡು ಕಲಾ ಮೇಡಂ ಇವರ ನೇತೃತ್ವದಲ್ಲಿ, ಆರು ದಿನ ನಡೆದ ಸುದರ್ಶನ ಕ್ರಿಯೆ, ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರವು ಮುನಿಯಾಲು ಮಾರಿಗುಡಿ ಗದ್ದುಗೆ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಜ.5 ರಂದು ಸಂಪನ್ನಗೊಂಡಿತು.


ದಿ ಆರ್ಟ್ ಆಫ್ ಲಿವಿಂಗ್ ಇದರ ಗುರುದೇವ್ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ದೂರದೃಷ್ಟಿಯಿಂದ ವಿಶ್ವದಾದ್ಯಂತ ನಡೆಯುತ್ತಿದ್ದು, ಪ್ರಚಲಿತದಲ್ಲಿರುವ ಶಿಬಿರವು, ಗ್ರಾಮೀಣ ಭಾಗವಾದ ಮುನಿಯಾಲಿನಲ್ಲಿ ನಡೆಸಿರುವುದು ಖುಷಿತಂದಿದೆ. ಆರು ದಿನ ಶಿಬಿರದಲ್ಲಿ ನಡೆದ ಆಸನಗಳನ್ನು ಸಂಪೂರ್ಣವಾಗಿ ದಿನನಿತ್ಯ ಬೆಳಿಗ್ಗೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಈ ವರೆಗೆ ಸುಮಾರು 50 ಕ್ಕೂ ಮಿಕ್ಕಿ ವಿವಿಧ ಕಡೆ ಶಿಬಿರವನ್ನು ನಡೆಸಿಕೊಟ್ಟ ಗುರುದೇವ್ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಪ್ರಿಯ ಶಿಷ್ಯೆ ಕಲಾ ಮೇಡಂ ಗೌರವವನ್ನು ಸ್ವೀಕರಿಸಿ ಮಾತನಾಡಿದರು.

ಖ್ಯಾತ ವೈದ್ಯರಾದ ಡಾ. ಸುದರ್ಶನ್ ಹೆಬ್ಬಾರ್, ಸಮಾಜ ಸೇವಕ, ಧಾರ್ಮಿಕ ಮುಂದಾಳು ಸುರೇಂದ್ರ ಬೋಂಟ್ರ, ಪ್ರಮುಖರಾದ ರಾಘವೇಂದ್ರ ಇವರು ಸಹಕರಿಸಿದರು.
ಶಿಬಿರಾರ್ಥಿಗಳ ಸಹಕಾರದಿಂದ ಸ್ಥಳೀಯ ಅಂಗನವಾಡಿ ಕೇಂದ್ರಗಳಿಗೆ ಕೊಡುಗೆಗಳನ್ನು ನೀಡಲಾಯಿತು.
ಸುಮಾರು 60 ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನವನ್ನು ಪಡೆದು, ಕಾರ್ಯಕ್ರಮಕ್ಕೆ ಸಹಕರಿಸಿದರು.
ಶಿಬಿರಾರ್ಥಿಗಳಾದ ಉದ್ಯಮಿ ಮಂಜುನಾಥ ಇವರು ಸ್ವಾಗತಿಸಿದರು. ವರಂಗ ರಾಮಚಂದ್ರ ಭಟ್ ನಿರೂಪಿಸಿ, ಪ್ರಗತಿಪರ ಕೃಷಿಕ ಹಾಗೂ ಹೈನೋದ್ಯಮಿ ಮೂರ್ಸಾಲು ಗೋವಿಂದರಾಜ್ ವಂದಿಸಿದರು.

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *