
ಕಾರ್ಕಳ, ಜೂ.15: ಬಾವಿಗೆ ಬಿದ್ದ ಬೆಕ್ಕನ್ನು ಕಾಪಾಡಲೆಂದು ಬಾವಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಮೇಲಕ್ಕೆ ಬರಲಾಗದೆ ಸಿಕ್ಕಿಹಾಕಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಕಾರ್ಕಳ ಪುಲ್ಕೇರಿ ಬಳಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ನಾರಾಯಣ ಭಟ್(47ವ) ಎಂಬವರು ಬಾವಿಗೆ ಬಿದ್ದ ತಮ್ಮ ಸಾಕು ಬೆಕ್ಕನ್ನು ರಕ್ಷಿಸಲು ಬಾವಿಗೆ ಇಳಿದಿದ್ದರು.
ಆದರೆ ಮೇಲಕ್ಕೆ ಬರಲಾಗದೆ ಸಿಕ್ಕಿಹಾಕಿಕೊಂಡಿದ್ದ ಅವರನ್ನು ಕೂಡಲೇ ಅಗ್ನಿಶಾಮಕ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ.
ಠಾಣಾಧಿಕಾರಿ ಚಂದ್ರಶೇಖರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರೂಪೇಶ್,ಭೀಮಪ್ಪ,ಗಣೇಶ, ದಿನೇಶ, ಸುರೇಶ್, ಚಾಲಕ ಮುಜಾಮೀರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


.
.
.
.
.
.
.
.
.
.
.
.
.
.
.
.
.
.
.
.
