
ಕಾರ್ಕಳ,ಜೂ.13: ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಯಕ್ಷ ಶಿಕ್ಷಣ ಟ್ರಸ್ಟ್ ಇವರ ಸಹಯೋಗದೊಂದಿಗೆ ಕಾರ್ಕಳ ಯಕ್ಷ ಕಲಾರಂಗ ಸಂಸ್ಥೆಯ ವತಿಯಿಂದ ಕಾರ್ಕಳದ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸಂಯುಕ್ತ ಸರಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಹದಿನೈದನೇ ವರ್ಷದ ಯಕ್ಷಗಾನ ತರಗತಿ ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿಎಂ.ಸಿ ಉಪಾಧ್ಯಕ್ಷೆ ವೀಣಾ ಭಂಡಾರಿ,
ಗಾನ ನೃತ್ಯ ಸಾಹಿತ್ಯಗಳ ಅಪೂರ್ವ ಸಂಗಮ ಕಲೆ ನಮ್ಮ ಯಕ್ಷಗಾನ ಇದನ್ನು ನಮ್ಮ ಪೀಳಿಗೆಯ ಮಕ್ಕಳು ಕರಗತ ಮಾಡಿಕೊಂಡರೆ ಪುರಾಣಗಳ ಇತಿಹಾಸ ರಕ್ಷಣೆ ಮಾಡಿದಂತೆ ಎಂದರು.
ಪುರಸಭಾ ಸದಸ್ಯ, ಎಸ್.ಡಿ.ಎಂ.ಸಿ ಸದಸ್ಯ ಪ್ರದೀಪ್ ಮಾತನಾಡಿ ,ಉಚಿತ ಯಕ್ಷ ಶಿಕ್ಷಣ ಪಡೆಯಲು ಅವಕಾಶ ದೊರೆತಿರುವುದು ನಮ್ಮ ಶಾಲಾ ಮಕ್ಕಳಿಗೆ ಸಿಕ್ಕ ಪುಣ್ಯ ಎಂದರು.
ಕಾರ್ಕಳ ಘಟಕದ ಕಾರ್ಯದರ್ಶಿ, ಯಕ್ಷ ಶಿಕ್ಷಣದ ಸಂಚಾಲಕ ಕಾಂತಾವರ ಮಹಾವೀರ ಪಾಂಡಿ ಅವರು ಟ್ರಸ್ಟ್ ನ ಕಾರ್ಯ ಚಟುವಟಿಕೆಗಳು ಹಾಗೂ ಯಕ್ಷ ಶಿಕ್ಷಣದ ಉದ್ದೇಶವನ್ನು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಕಳ ಘಟಕದ ಅದ್ಯಕ್ಷ ವಿಜಯ ಶೆಟ್ಟಿ ಉಪಸ್ಥಿತರಿದ್ದು ಸಾಂದರ್ಭಿಕ ಮಾತುಳನ್ನಾಡಿದರು.
ಕಲಾರಂಗದ ಉಪಾದ್ಯಕ್ಷ ಬಿ.ಕೆ ಈಶ್ವರಮಂಗಲ,
ನಿವೃತ್ತ ಅದ್ಯಾಪಿಕೆ ಶ್ರೀಮತಿ ಸಾವಿತ್ರಿ ಮನೋಹರ್, ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅದ್ಯಕ್ಷ ದಿನೇಶ್ ಮಡಿವಾಳ, ನಿಕಟ ಪೂರ್ವ ಅದ್ಯಕ್ಷರಾದ ರವಿಕಾಂತ್ ಶೆಣೈ, ಕೃಷ್ಣ ಮಡಿವಾಳ, ಯಕ್ಷ ಶಿಕ್ಷಕರಾದ ಅಜಿತ್ ಕುಮಾರ್ ಜೈನ್,ಕೀರ್ತನ್ ಕಾರ್ಕಳ ವೇದಿಕೆಯಲ್ಲಿದ್ದರು. ಹೈಸ್ಕೂಲ್ ಮುಖ್ಯ ಅಧ್ಯಾಪಕ ದಿವಾಕರ್ ಸರ್ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯ ಅಧ್ಯಾಪಕ ಸುಧಾಕರ ಪೂಜಾರಿ ಧನ್ಯವಾದ ವಿತ್ತರು.ಹೈಸ್ಕೂಲ್ ಸಹ ಅಧ್ಯಾಪಕ ಬಾಲಕೃಷ್ಣ ನಾಯಕ್ ನಿರೂಪಿಸಿದರು.
ಉಸ್ತುವಾರಿ ಶಿಕ್ಷಕರಾದ ಶಿವಸುಭ್ರಹ್ಮಣ್ಯ ಭಟ್, ದೈಹಿಕ ಶಿಕ್ಷಕಿ ವೇದಾವತಿ, ರೇವತಿ ಸಹಕರಿಸಿದರು.
ಯಕ್ಷ ಗುರುಗಳು ವೀಳ್ಯ ಪಡೆದು ಯಕ್ಷನಾಟ್ಯ ತರಗತಿ ಆರಂಬಿಸಿದರು.
ಸಬ್ ಯಲ್ಲಿ

.
.
.
.
.
.
.
.
.
.
.
.
.
.
.
.
.
.
.
.
