ಕಾರ್ಕಳ; : ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಕಳ ತಾಲೂಕಿನ ಬಗರ್-ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸಭೆಯು ಶುಕ್ರವಾರ ಕಾರ್ಕಳ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಕಛೇರಿಯಲ್ಲಿ ನಡೆದ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಒಟ್ಟು 41 ಕಡತಗಳನ್ನು ಸಮಿತಿಯ ಮುಂದೆ ಮಂಡಿಸಲಾಗಿದ್ದು, ಈ ಪೈಕಿ 32 ಕಡತಗಳಿಗೆ ಮಂಜೂರಾತಿಗೆ ಶಿಫಾರಸ್ಸು ಮಾಡಲಾಯಿತು. ಹಾಗೂ ಸುಮಾರು ವರ್ಷಗಳಿಂದ ಮಂಜೂರಾತಿಗೆ ಬಾಕಿ ಇರುವ ಅರ್ಹ ಅಕ್ರಮ ಸಕ್ರಮ ಅರ್ಜಿಗಳನ್ನು ಆದಷ್ಟು ಬೇಗ ತನಿಖೆ ನಡೆಸಿ ಮಂಜೂರಾತಿಗೆ ಕ್ರಮವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸಮಿತಿಯ ಕಾರ್ಯದರ್ಶಿ ಹಾಗೂ ಕಾರ್ಕಳ ತಹಶೀಲ್ದಾರರಾದ ಪ್ರದೀಪ್ ಆರ್., ಅಕ್ರಮ ಸಕ್ರಮ ಸಮಿತಿ ಸದಸ್ಯರುಗಳಾದ ನವೀನ್ ದೇವಾಡಿಗ, ರಮೇಶ್ ಬಜಕಳ, ಶ್ರೀಮತಿ ಸುನಿತಾ ಶೆಟ್ಟಿ, ಉಪ ತಹಶೀಲ್ದಾರ್ ಮಂಜುನಾಥ್ ನಾಯಕ್, ವಿಷಯ ನಿರ್ವಾಹಕರಾದ ತಾರೇಶ್, ಕು.ಪೂಜಾ, ಹಾಗೂ ಕಾರ್ಕಳ ಮತ್ತು ಅಜೆಕಾರು ಹೋಬಳಿ ಕಂದಾಯ ನಿರೀಕ್ಷಕರು ಹಾಗೂ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು, ತಾಂತ್ರಿಕ ಸಮಾಲೋಚಕರು ಉಪಸ್ಥಿತರಿದ್ದರು.