ಕಾರ್ಕಳ: ಮಂಜಲ್ಪಾದೆ ಅಂಗನವಾಡಿ ಕೇಂದ್ರ ಮುಡಾರು ಇದರ 29ನೇ ವರ್ಷದ ವಾರ್ಷಿಕೋತ್ಸವ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸ್ವಯಂ ನಿವೃತ್ತಿಗೊಂಡ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಅಮೀನ್‌ವವರಿಗೆ ಬೀಳ್ಕೊಡುಗೆ ಸಮಾರಂಭ ಜ.2 ರಂದು ಮಂಜಲ್ಪಾದೆ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಕಾರ್ಕಳದ ಶಾಸಕರಾದ ವಿ ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಚೇತನ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರುತಿ ಡಿ ಅತಿಕಾರಿ, ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರು ಗಳಾದ ಸುರೇಶ್ ಶೆಟ್ಟಿ ಹಾಗೂ ಮಾಲತಿ ನಾಯ್ಕ, ಪಂಚಾಯತ್ ಸದಸ್ಯರುಗಳಾದ ವಿನಯ ಡಿ ಬಂಗೇರ, ರಜತ್ ಮೋಹನ್, ಸಂತೋಷ್ ಪೂಜಾರಿ, ಪ್ರಶಾಂತ್ ಪೂಜಾರಿ, ಶಿವಪ್ರಸಾದ್ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳಾದ ವಿಜಯನಾರಾಯಣ ನಾಯಕ್, ಡಾ. ಗಿರೀಶ್ ಗೌಡ, ಡಾ. ವೆಂಕಟಗಿರಿ ರಾವ್ ಕೊಡುಗೈ ದಾನಿಗಳಾದ ಮಹಾವೀರ್ ಹೆಗ್ಡೆ, ಗಣೇಶ್ ಪೂಜಾರಿ ದುಗ್ಗಟ್ಟು, ಪ್ರಧಾನ ಅರ್ಚಕರು ಮುಡ್ರಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಾಮಚಂದ್ರ ಭಟ್ ,ಮುಡಾರು ಗ್ರಾಮ ಪಂಚಾಯಿತಿ ಪಿಡಿಓ ರಮೇಶ್, ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಜೆಗೋಳಿ ವಲಯದ ಮೇಲ್ವಿಚಾರಕಿ ಶಾಂಭವಿ, ಬಜಗೋಳಿ ಹಾಗೂ ನಲ್ಲೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಈ ಸಂದರ್ಭ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮುಡಾರು ಗ್ರಾಮದ ಎಸ್ ಎಲ್ ಆರ್ ಎಂ ಘಟಕದ 5 ಸದಸ್ಯರಿಗೆ ಗೌರವಿಸಲಾಯಿತು.
ಅಂಗನವಾಡಿ ಪುಟಾಣಿಗಳಿಗೆ ಸಮವಸ್ತç ವಿತರಣೆ, ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಪೋಷಕರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.
ಸ್ನೇಹ ಸಹನಾ, ಸೌಜನ್ಯ, ಸಮ್ಮಿಲನ, ಸಂರಕ್ಷ ಗುಂಪಿನ ವತಿಯಿಂದ ಮುಡಾರು ಗ್ರಾಮದ ಶ್ರೀ ಬ್ರಹ್ಮ ಮುಗೇರಕಳ ದೈವಸ್ಥಾನದ ಜೀರ್ಣೋದ್ಧಾರಕ್ಕಾಗಿ ರೂ. 25055 ಅನ್ನು ಹಸ್ತಾಂತರಿಸಲಾಯಿತು.
ಅAಗನವಾಡಿ ಕಾರ್ಯಕರ್ತೆ ಪದ್ಮಾವತಿ ಟೀಚರಿಗೆ ಅಭಿನಂದನಾ ಕಾರ್ಯಕ್ರಮ ನೆರವೇರಿತು. ಅಭಿನಂದನೆಯನ್ನು ಸ್ವೀಕರಿಸಿ ತಮ್ಮ 36 ವರ್ಷಗಳ ಸುದೀರ್ಘ ಸೇವಾ ವಧಿಯ ಸವಿ ನೆನಪುಗಳನ್ನುಮೆಲುಕು ಹಾಕಿ, ಸ್ತ್ರೀಶಕ್ತಿ ಗುಂಪುಗಳ ವರದಿ ವಾಚಿಸಿ ಪ್ರಸ್ತಾವನೆಗೈದರು.
ಎಸ್‌ಎಲ್‌ಆರ್‌ಎಂ ಘಟಕದ ಮೇಲ್ವಿಚಾರಕಿ ಮಾಧವಿ ಪ್ರಭು ಸ್ವಾಗತಿಸಿ, ವಿನಯ ಡಿ ಬಂಗೇರ ವಂದಿಸಿದರು. ಮುಡ್ರಾಲ್ ಶಾಲೆ ಮುಖ್ಯ ಶಿಕ್ಷಕ ಸುರೇಶ್ ಪೂಜಾರಿಕಾರ್ಯಕ್ರಮ ನಿರೂಪಿಸಿದರು.
ಜನೌಷಧಿ ಮಾಲಕ ಸುಶಾಂತ ಹಾಗೂ ಪ್ರಜ್ಞೇಶ್ ಕುಮಾರ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.
ಸುನಿಲ್ ಬುನ್ನಾಡಿ ಹಾಗೂ ಭಾಸ್ಕರ್ ಪೂಜಾರಿ, ಅಂಗನವಾಡಿ ಸಹಾಯಕಿ ನೇತ್ರಾವತಿ ಸಹಕರಿಸಿದರು.