
ನವದೆಹಲಿ,ಏ.21: ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಕಳೆದ ವರ್ಷ ಏಪ್ರಿಲ್ 22 ರಂದು ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿ ನಡೆಸಿ 26 ಜನರನ್ನು ನಿರ್ದಯವಾಗಿ ಹತ್ಯೆಗೈದ ಹಿಂದಿನ ಸಂಚುಕೋರ ಭಯೋತ್ಪಾದಕ ಸಜಿದ್ ಜತ್ ಅಲಿಯಾಸ್ ಹಬೀಬುಲ್ಲಾ ತಬಸ್ಸುಮ್ ಪಾಕಿಸ್ತಾನದಲ್ಲಿ ವಾಸವಿರುವುದು ಸಾಕ್ಷಿ ಸಹಿತ ಬಯಲಾಗಿದೆ.ಈ ದಾಳಿಯ ಮಾಸ್ಟರ್ಮೈಂಡ್ ಲಷ್ಕರ್ ಎ ತೈಬಾ ಸಂಘಟನೆಯ ಹಿರಿಯ ಕಮಾಂಡರ್ ಸಜಿದ್ ಜತ್ ಅಲಿಯಾಸ್ ಹಬೀಬುಲ್ಲಾ ತಬಸ್ಸುಮ್ ಪಾಕಿಸ್ತಾನದಲ್ಲಿ ಅಡಗಿರುವ ಕುರಿತು ಇಂಡಿಯಾ ಟುಡೇ ಟಿವಿ ನಡೆಸಿರುವ ವಿಶೇಷ ತನಿಖೆಯಲ್ಲಿ ಬಹಿರಂಗವಾಗಿದೆ. ಈತ ಪಾಕಿಸ್ತಾನದ ಜೊತೆ ಇಟ್ಟುಕೊಂಡಿರುವ ಸಂಪರ್ಕಗಳನ್ನು ಸಾಕ್ಷಿ ಸಮೇತ ಬಯಲಿಗೆಳೆದಿದೆ.
ಪಹಲ್ಗಾಮ್ ದಾಳಿಯ ಸಂಚುಕೋರ ಸಜಿದ್ ಜತ್ ಅಲಿಯಾಸ್ ಹಬೀಬುಲ್ಲಾ ತಬಸ್ಸುಮ್ (ಸೈಫುಲ್ಲಾ ಸಜಿದ್ ) ಗುರುತು ಬದಲಿಸಿ ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದಾನೆ. ಈತ ಪದೇಪದೇ ತನ್ನ ಗುರುತು, ವಾಸಸ್ಥಾನ ಮತ್ತು ರೂಪವನ್ನು ಬದಲಿಸುವ ಮೂಲಕ ಭಾರತೀಯ ತನಿಖಾ ಸಂಸ್ಥೆಗಳಿAದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದು ವರದಿ ತಿಳಿಸಿದೆ. ಇಂಡಿಯಾ ಟುಡೇ ತನಿಖಾ ತಂಡವು ಈತನ ಅಸಲಿ ಗುರುತಿನ ಚೀಟಿಯನ್ನು ಪತ್ತೆಹಚ್ಚಿದೆ. ಪಾಕಿಸ್ತಾನದ ಕಸೂರ್ ಜಿಲ್ಲೆಯ ಪಟ್ಟೋಕಿ ತಹಸಿಲ್ನ ಭೋಯ್ ಅಸಲ್ ಗ್ರಾಮದವನು ಎಂದು ಆತನ ಗುರುತಿನ ಚೀಟಿಯಿಂದ ಮಾಹಿತಿ ಬಹಿರಂಗವಾಗಿದೆ. ಈತನ ತಂದೆ ಮೊಹಮ್ಮದ್ ರಫೀಕ್ ಎಂದು ಗುರುತಿನ ಚೀಟಿಯಲ್ಲಿ ನಮೂದಿಸಲಾಗಿದೆ.
ತನಿಖೆಯ ವೇಳೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಈತನ ನಿವಾಸ ಮತ್ತು ಸೇಫ್ ಹೌಸ್ಗಳ ದೃಶ್ಯಗಳು ಲಭ್ಯವಾಗಿವೆ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ರಕ್ಷಣೆಯಲ್ಲಿ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯ ನಡುವೆ ಓಡಾಡುತ್ತಿರುವುದು ತಿಳಿದುಬಂದಿದೆ.ಇದಲ್ಲದೇ ಈತ ಕಣಿವೆಯ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದಾಳಿಯ ನಿರ್ದೇಶನ ನೀಡುತ್ತಿದ್ದ ಎಂದು ಎನ್ಐಎ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.


.
.
.
.
.
.
.
.
.
.

ಕಾರ್ಕಳ, ಏ. 20: ಕಾರ್ಕಳ ತಾಲೂಕು ಮರ್ಣೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆನಂದ ಸೆರ್ವೆಗಾರ್ (65ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಅವರು ಕಳೆದ 15 ವರ್ಷಗಳಿಂದ ಮರ್ಣೆ ಗ್ರಾಮದ ವಸಂತ ಶೆಟ್ಟಿಯವರ ಕುಂಠಿನಿ ಮನೆ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಅವರು ಅದೇ ಕಾರಣಕ್ಕೆ ಮನನೊಂದು ನಿನ್ನೆ(ಏ.19) ರಾತ್ರಿ ಮನೆಯ ಮುಂಭಾಗದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
