

ನವದೆಹಲಿ, ಅ. 01: ದಸರಾ ಹಬ್ಬಕ್ಕೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಾಗಿದೆ. ಪ್ರತಿ ತಿಂಗಳು ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕೃತಗೊಳಿಸುತ್ತವೆ. ಇಂದು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಮಹತ್ವದ ಬದಲಾವಣೆಗಳು ಕಂಡು ಬಂದಿವೆ. ಅಕ್ಟೋಬರ್ 1ರಿಂದ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆ ಬರೋಬ್ಬರಿ 62.50 ರೂ.ನಷ್ಟು ಹೆಚ್ಚಾಗಿದೆ. ನವದೆಹಲಿಯಲ್ಲಿ ಪ್ರತಿ ಸಿಲಿಂಡರ್ ದರ 2,810ರೂ.ಗೆ ತಲುಪಿದೆ.
ಸೆಪ್ಟೆಂಬರ್ ತಿಂಗಳಲ್ಲಿ 9.50 ರೂ. ಏರಿಕೆಯಾಗಿದ್ದ ಬೆಲೆ, ಇದೀಗ ಅಕ್ಟೋಬರ್ ಆರಂಭದಲ್ಲೇ ಭಾರಿ ಪ್ರಮಾಣದಲ್ಲಿ ಜಿಗಿದಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳ ಸಡಗರದ ಹೊಸ್ತಿಲಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು ಹಾಗೂ ಬೀದಿಬದಿಯ ತಿನಿಸು ಕೇಂದ್ರಗಳಿಗೆ ಈ ಬೆಲೆ ಏರಿಕೆ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ.
ಸಾಮಾನ್ಯ ಕುಟುಂಬಗಳು ಬಳಸುವ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೆಹಲಿಯಲ್ಲಿ 942 ರೂ., ಮುಂಬೈನಲ್ಲಿ 941.50 ರೂ., ಚೆನ್ನೈನಲ್ಲಿ 957.50 ರೂ., ಲಕ್ನೋದಲ್ಲಿ 979.50 ರೂ. ಹಾಗೂ ಪಾಟ್ನಾದಲ್ಲಿ 1,031.50 ರೂ. ದರ ಮುಂದುವರಿದಿದ್ದು, ಗೃಹಿಣಿಯರಿಗೆ ಹಾಗೂ ಜನಸಾಮಾನ್ಯರಿಗೆ ಸದ್ಯಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟಿಲ್ಲ.





.
.
.
.
.
.
.
.
.
.
.
.
.
.
.
.
.
.
.
.
