ಕಾರ್ಕಳ: ಕಾರ್ಕಳ ತಾಲೂಕು ಮುಡಾರು ಗ್ರಾಮದ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ನಿಂದ ದುಷ್ಕರ್ಮಿಗಳು ದನಗಳನ್ನು ಕಳವುಗೈದಿರುವ ಘಟನೆ ಸೋಮವಾರ (ಜೂ.16) ತಡರಾತ್ರಿ ನಡೆದಿದೆ.
ಎಂ.ಕೆ ವಿರಂಜಯ್ ಅವರು ನಡೆಸಿಕೊಂಡು ಬರುತ್ತಿರುವ ಅಹಿಂಸಾ ಟ್ರಸ್ಟ್ ನ ಹಟ್ಟಿಯಲ್ಲಿದ್ದ ಸುಮಾರು 10,000 ರೂ. ಮೌಲ್ಯದ 3 ದನಗಳನ್ನು ಕಳ್ಳರು ಕಳವುಗೈದು ವಾಹನದಲ್ಲಿ ತುಂಬಿಸಿಕೊAಡು ಪರಾರಿಯಾಗಿದ್ದಾರೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.