ಕಾರ್ಕಳ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿಯಾಗಿ ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಿಯಾರು ಗ್ರಾಮದ ನಾರ್ಕಟ್ಟ ನಿವಾಸಿ ಪಾಂಡುರಂಗ (57) ಮೃತಪಟ್ಟ ದುರ್ದೈವಿ. ಅವರು ಕುಂಟಿಬೈಲು ಕಡೆಯಿಂದ ಕೆರ್ವಾಶೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮುಡಾರು ಗ್ರಾಮದ ಅಬ್ಬನಬೆಟ್ಟು ಬಸದಿ ಕ್ರಾಸ್ ಹತ್ತಿರ ಮಾರುತಿ ಕಾರನ್ನು ಅದರ ಚಾಲಕ ಶ್ರೀರಾಮ ಗೋರೆ ಎಂಬವರು ಅತಿವೇಗ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾಂಡುರಂಗ ರವರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ಪರಿಣಾಮ ರಸ್ತೆಗೆ ಬಿದ್ದ ಪಾಂಡುರಂಗ ರವರ ಕೈಮೂಳೆ ಮುರಿದಿದ್ದು, ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.