ಹೆಬ್ರಿ: ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ಬಸ್ ಡಿಕ್ಕಿಯಾದ ಪರಿಣಾಮ ತಂದೆ ಹಾಗೂ ಮಗಳು ಗಾಯಗೊಂಡ ಘಟನೆ ಹೆಬ್ರಿ ತಾಲೂಕಿನ ಮುನಿಯಾಲು ಪೇಟೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಮುಟ್ಲುಪಾಡಿಯ ನಿವಾಸಿ ಭೋಜ ಹಾಗೂ ಸುಕನ್ಯಾ ಗಾಯಗೊಂಡವರು. ಮುನಿಯಾಲು ಸಮೀಪದ ಮುಟ್ಲುಪಾಡಿಯ ಭೋಜ ಎಂಬವರು ತನ್ನ ಮಗಳ ಜತೆ ಮುಟ್ಲುಪಾಡಿಯಿಂದ ಮೂಡಬಿದ್ರೆಗೆ ಹೋಗುವ ಸಲುವಾಗಿ ಮುನಿಯಾಲು ಬಸ್ ನಿಲ್ದಾಣದ ಬಳಿ ಕಾರ್ಕಳ ಕಡೆಗೆ ಹೋಗುತ್ತಿದ್ದಾಗ ಹೆಬ್ರಿ ಕಡೆಯಿಂದ ಅತೀವೇಗವಾಗಿ ಬರುತ್ತಿದ್ದ ಸುನಿಲ್ ಮೋಟಾರ್ಸ್ ಹೆಸರಿನ ಖಸಗಿ ಬಸ್ ಬೈಕಿಗೆ ಹಿಂಬದಿಯಿAದ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಿಂದ ಸವಾರ ಭೋಜ ಹಾಗೂ ಸುಕನ್ಯಾ ಅವರ ತಲೆ ಹಾಗೂ ಕೈಕಾಲಿಗೆ ಗಾಯಗಳಾಗಿವೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.