ಕಾರ್ಕಳ: ನೋಂದಣಿ ಸಂಖ್ಯೆ ಇಲ್ಲದ ಹೊಸ ಆಂಬ್ಯುಲೆನ್ಸ್ ಒಂದು ಬಸ್ಸಿಗೆ ಡಿಕ್ಕಿಯಾಗಿ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ವಿದ್ಯುತ್ ಕಂಬ ತುಂಡಾಗಿದ್ದು, ವಾಹನಗಳೆರಡೂ ಜಖಂಗೊAಡಿರುವ ಘಟನೆ ಕುಕ್ಕುಂದೂರು ಗ್ರಾಮದ ದುರ್ಗಾ ಹೈಸ್ಕೂಲ್ ಬಳಿ ಗುರುವಾರ ನಡೆದಿದೆ.
ದುರ್ಗಾ ಹೈಸ್ಕೂಲ್ ಬಳಿ ಪ್ರಯಾಣಿಕರನ್ನು ಇಳಿಸಿದ ಬಸ್ ಅಜೆಕಾರು ಕಡೆಗೆ ಹೋಗುತ್ತಿದ್ದಾಗ ಅಜೆಕಾರು ಕಡೆಯಿಂದ ಅತೀವೇಗವಾಗಿ ಬಂದ ನೊಂದಣಿ ಸಂಖ್ಯೆ ಇಲ್ಲದ ಹೊಸ ಆಂಬ್ಯುಲೆನ್ಸ್ ಬಸ್ಸಿನ ಬಲಬದಿಗೆ ಡಿಕ್ಕಿ ಹೊಡೆದು ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.
ಆಂಬ್ಯುಲೆನ್ಸ್ ಡಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹನಿ ಸಂಭವಿಸಿಲ್ಲ. ಅಪಘಾತತದಿಂದ ವಾಹನಗಳೆರಡೂ ಜಖಂಗೊAಡಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.