Share this news

 

ಕಾರ್ಕಳ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದಂಪತಿಯನ್ನು ಕಾರ್ಕಳ ಅಗ್ನಿಶಾಮಕ ದಳದವರು ರಕ್ಷಿಸಿರುವ ಘಟನೆ (ಜಿ5)ರವಿವಾರ ಬೆಳಿಗ್ಗೆ ನಡೆದಿದೆ.
ಕಾರ್ಕಳದ ಕಲ್ಲೊಟ್ಟೆ ಪೆರ್ವಾಜೆ ರಸ್ತೆಯ ನಿವಾಸಿಗಳಾದ ಅನಿತಾ ಮಲ್ಯ (57) ಹಾಗೂ ಆಕೆ ಗಂಡ ಅಣ್ಣಪ್ಪ ಮಲ್ಯ (59) ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುಮಾರು 60 ಅಡಿ ಆಳದ ಬಾವಿಗೆ ಮಹಿಳೆಯೊಬ್ಬರು ಭಾನುವಾರ ಮುಂಜಾನೆ ಆಕಸ್ಮಿಕವಾಗಿ ಬಿದ್ದಿದ್ದು, ಅವರನ್ನು ರಕ್ಷಿಸಲು ಗಂಡ ಅದೇ ಬಾವಿಗೆ ಇಳಿದಿದ್ದರು ಎನ್ನಲಾಗಿದೆ. ನೀರಿನ ಮಟ್ಟದಲ್ಲಿ ಪಂಪ್ ಪೈಪ್ ಹಿಡಿದು ಅಪಾಯದಲ್ಲಿದ್ದ ಮಹಿಳೆ ಹಾಗೂ ಅವರ ಗಂಡನನ್ನು ಕಾರ್ಕಳ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ತಕ್ಕ್ಷಣ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ.

ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಹಾಯಕ ಅಗ್ನಿಶಾಮಕ ಅಧಿಕಾರಿ ಚಂದ್ರ ಶೇಖರ್, ಸಿಬ್ಬಂದಿಯವರಾದ ಹರಿಪ್ರಸಾದ್ ಶೆಟ್ಟಿಗಾರ್, ಸಂಜಯ್, ಹಸನ್ ಮುಲ್ತಾನಿ, ರವಿಚಂದ್ರ ಕೊರವರ ಭಾಗವಹಿಸಿದ್ದರು.

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *