
ಕಾರ್ಕಳ, ಜೂ. 16: ಕಾರ್ಕಳ ಕಸಬಾ ಗ್ರಾಮದ ಪುಲ್ಕೇರಿ ಬಳಿ ಬೈಕಿಗೆ ಗೂಡ್ಸ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜೂ. 14 ರಂದು ಈ ಅಪಘಾತ ನಡೆದಿದ್ದು, ಚೇತನ್ ಎಂಬವರು ತಮ್ಮ ಬೈಕಿನಲ್ಲಿ ಸ್ನೇಹಿತ ಸಂಪತ್ ಎಂಬವರೊಂದಿಗೆ ಮೂಡಬಿದ್ರೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದಾಗ ಪುಲ್ಕೇರಿ ದಿವ್ಯ ಅಪಾರ್ಟ್ಮೆಂಟ್ ಬಳಿ ಹಿಂದಿನಿಂದ ಬಂದ ಗೂಡ್ಸ್ ಒವರ್ ಟೇಕ್ ಮಾಡುವ ಭರದಲ್ಲಿ ಬೈಕಿಗೆ ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಬೈಕ್ ಸವಾರ ಚೇತನ್ ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಹಸವಾರ ಸಂಪತ್ ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
