ಹೆಬ್ರಿ: ಈಗಾಗಲೇ ಸುಮಾರು ರೂ.700 ಲಕ್ಷ ವೆಚ್ಚದಲ್ಲಿ ಮುನಿಯಾಲಿನ ಚತುಷ್ಪಥ ರಸ್ತೆ ಕಾಮಗಾರಿ ಮುಗಿದಿದ್ದು ಶಾಸಕ ವಿ ಸುನಿಲ್ ಕುಮಾರ್ ದಾರಿದೀಪದ ಉದ್ಘಾಟನೆಯನ್ನು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮುನಿಯಾಲಿನ ಪ್ರಥಮದರ್ಜೆ ಕಾಲೇಜಿನವರೆಗೆ ರಸ್ತೆ ಆಗಲೀಕರಣ ಮುಂದುವರಿಸುವ ಯೋಜನೆ ಹಾಕಿದ್ದು, ಸ್ವಚ್ಛ ಕಾರ್ಕಳ ಸ್ವರ್ಣ ಕಾರ್ಕಳವನ್ನಾಗಿ ಮಾಡಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಅಮೀನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಜ್ಯೋತಿ ಹರೀಶ್, ಎಮ್. ದಿನೇಶ್ ಪೈ ಮುನಿಯಾಲು, ಪಂಚಾಯತ್ ಮಾಜಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಸಮೃದ್ಧಿ ಪ್ರಕಾಶ್ ಶೆಟ್ಟಿ, ಹಿಂದೂ ಹೆಲ್ಪ್ ಲೈನ್ ನ ಗೌರವಾಧ್ಯಕ್ಷ ಡಾ. ಸುದರ್ಶನ್ ಹೆಬ್ಬಾರ್, ವಿದ್ಯುತ್ ಗುತ್ತಿಗೆದಾರ ಸುರೇಂದ್ರ ಕುಲಾಲ್ ವರಂಗ, ಸತೀಶ್ ಪೂಜಾರಿ ಕಡ್ತ
ಲ, ಪೂಜಾ ಶಂಕರ್ ಶೆಟ್ಟಿ,ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಶರರಾದ ಶ್ರೀಧರ್ ಪೈ ಮತ್ತು ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸುಹಾಸ್ ಶೆಟ್ಟಿ ಮುಟ್ಲುಪಾಡಿ ಸ್ವಾಗತಿಸಿದರು.