ಕಾರ್ಕಳ: ಕಾರ್ಕಳ ಪುಲ್ಕೇರಿ ಬೈಪಾಸ್ ಜಂಕ್ಷನ್ ನಲ್ಲಿ ನೂತನವಾಗಿ ನಿರ್ಮಾಣಗೊಳ್ಳುವ ಕಾರ್ಕಳ ಇನ್ ವಾಣಿಜ್ಯ ಸಂಕೀರ್ಣವು ನಾಳೆ (ಜ.19) ಸಂಜೆ 5 ಗಂಟೆಗೆ ಶುಭಾರಂಭಗೊಳ್ಳಲಿದೆ.
ಈ ವಾಣಿಜ್ಯ ಸಂಕೀರ್ಣದಲ್ಲಿ ಹೋಟೆಲ್ ಅನಘ ಗ್ರಾಂಡ್ ಎಂಬ ಫ್ಯಾಮಿಲಿ ರೆಸ್ಟೋರೆಂಟ್ (ವೆಜ್ ಮತ್ತು ನಾನ್‌ವೆಜ್), ವಸತಿ ಗ್ರಹ, 300 ಜನರ ಆಸನ ವ್ಯವಸ್ಥೆಯ ಬ್ಯಾಂಕ್ವೇಟ್ ಹಾಲ್ ಮತ್ತು ಓಪನ್ ಗಾರ್ಡನ್ ವ್ಯವಸ್ಥೆ ಒಳಗೊಂಡಿದ್ದು, ಶುಭಾರಂಭದ ಪ್ರಯುಕ್ತ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಜರಗಲಿದೆ ಎಂದು ಛತ್ರಪತಿ ಫೌಂಡೇಶನ್ ಪ್ರಕಟಣೆ ತಿಳಿಸಿದೆ.