ಕಾರ್ಕಳ: ಇತಿಹಾಸ ಪ್ರಸಿದ್ಧ ಮಿಯ್ಯಾರು ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಹಸಿರು ಹೊರೆ ಕಾಣಿಕೆ ಶೋಭಾ ಯಾತ್ರೆಯು ಜನವರಿ 16ರಂದು ಪುಲ್ಕೇರಿ ಬೈಪಾಸ್ ಪಡುತಿರುಪತಿ ಮೈದಾನದಿಂದ ದೇವಸ್ಥಾನದವರೆಗೆ ಸಾಗಿತು.
ಹಸಿರು ಹೊರೆ ಕಾಣಿಕೆ ಜೊತೆಗೆ ಡೊಳ್ಳು ಕುಣಿತ, ಚೆಂಡೆ, ಕುದುರೆ ಕುಣಿತ, ಕುಣಿತ ಭಜನಾ ತಂಡಗಳು, ನಾಸಿಕ್ ಬ್ಯಾಂಡ್, ಬಣ್ಣದ ಕೊಡೆಗಳು, ಅಯೋಧ್ಯೆ ರಾಮ ಮಂದಿರ, ಮಹಿಷಮರ್ದಿನಿ, ಶಿವ ಪಾರ್ವತಿ ನರ್ತನ, ಆಂಜನೇಯ, ಶಿವಲಿಂಗ ಸೇರಿದಂತೆ ಹಲವಾರು ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.