
ಕಾರ್ಕಳ, ಜೂ.03: ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಪೇರಲ್ಕೆ ಎಂಬಲ್ಲಿ ವ್ಯಕ್ತಿಯೊಬ್ಬರು ಮಲಗಿದ್ದಲ್ಲಿಯೇ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ಪೇರಲ್ಕೆಯ ಸದಾನಂದ (43ವ) ಮೃತಪಟ್ಟವರು. ಮರದ ಕೆಲಸ ಮಾಡಿಕೊಂಡಿದ್ದ ಅವರು ಮಂಗಳವಾರ(ಜೂ. 2) ರಾತ್ರಿ ಎಂದಿನಂತೆ ಮಲಗಿದ್ದವರು ರಾತ್ರಿ 11.30 ರ ವೇಳೆಗೆ ಏಕಾಏಕಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಸದಾನಂದ ಮೃತಪಟ್ಟಿದ್ದರು.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
