ಕಾರ್ಕಳ: ಜ್ಞಾನದೇಗುಲ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿದ ಕಳ್ಳರು ನಗದಿಗಾಗಿ ತಡಕಾಡಿ ಕೊನೆಗೆ ನಗದು ಸಿಗದೇ ಬರಿಗೈಯಲ್ಲೇ ವಾಪಾಸಾದ ಘಟನೆ ಮಾ.6ರ ರಾತ್ರಿ ನಡೆದಿದೆ.
ಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ ಅವರು ಮಾ.6 ರಂದು ಸಂಜೆ ಎಂದಿನAತೆ ಶಾಲಾ ಕೊಠಡಿಗಳಿಗೆ ಬೀಗ ಹಾಕಿ ತೆರಳಿದ್ದರು. ಅದೇ ದಿನ ರಾತ್ರಿ ಶಾಲೆಯ ಬೀಗವನ್ನು ಮುರಿದು ಒಳನುಗ್ಗಿದ್ದ ಕಳ್ಳರು ಕಪಾಟಿನ ಬಾಗಿಲನ್ನುöತೆರೆದು ಪುಸ್ತಕಗಳನ್ನು ತಡಕಾಡಿ ಹಣಕ್ಕಾಗಿ ಹುಡುಕಾಡಿದ್ದರು. ಆದರೆ ಕೊನೆಗೆ ಏನೂ ಸಿಗದೇ ಬರಿಗೈನಲ್ಲಿ ವಾಪಾಸಾಗಿದ್ದಾರೆ.
ಮರುದಿನ ಶಿಕ್ಷಕರು ಶಾಲೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

K