ಅಜೆಕಾರು: ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಗುರುವಾರ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿರ್ಲಾಲು ನಿವಾಸಿ ಸಹನ್ (29) ಮೃತ ದುರ್ದೈವಿ.
ಸಹನ್ ವಿಪರೀತ ಮದ್ಪಾನ ಮಾಡುತ್ತಿದ್ದು, ಮದ್ಯಪಾನ ಬಿಡಿಸಲು ಮನೆಯವರು ಚಿಕಿತ್ಸೆಯನ್ನೂ ಕೊಡಿಸಿದ್ದರು. ಆದರೂ ಮದ್ಯಪಾನ ಬಿಡದ ಸಹನ್ ಇದೇ ವಿಚಾರಕ್ಕೆ ಮನನೊಂದಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.6 ರಂದು ಶಿರ್ಲಾಲಿನ ಕಡ್ದಬೈಲು ಎಂಬಲ್ಲಿರುವ ತಮ್ಮ ಮನೆಯಲ್ಲಿ ಕಬ್ಬಿಣದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

K