ಕಾರ್ಕಳ:ಹಚ್ಚಹಸುರಿನಿಂದ ಕಂಗೊಳಿಸುವ ಪಶ್ಚಿಮಘಟ್ಟದಲ್ಲಿ ಕಳೆದ ಎರಡು ದಶಕಗಳ ಹಿಂದೆ ಸಕ್ರೀಯವಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಗರಿಗೆದರಿದೆಯೇ ಎನ್ನುವ ಆತಂಕ ಕಾಡಿದೆ.
ಕಾರ್ಕಳ ತಾಲೂಕಿನ ಈದು ಗ್ರಾಮದ ಬಲ್ಯೊಟ್ಟಿನಲ್ಲಿ ಕಳೆದ ಎರಡು ದಶಕಗಳ ಹಿಂದೆ ಕಾಣಿಸಿಕೊಂಡಿದ್ದ ನಕ್ಸಲರು ಮತ್ತೆ ಈ ಭಾಗದಲ್ಲಿ ಸುಳಿದಾಡಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಕಳೆದ ಸೋಮವಾರ ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡವು ಈದು ಗ್ರಾಮದ ಮುಸ್ಲಿಂ ಕಾಲೋನಿಯ ಬಳಿಯಿರುವ ಬಂಡೆಕಲ್ಲು ಸಮೀಪ ಕಾಣಿಸಿಕೊಂಡಿದ್ದು, ಕಾಡುತ್ಪತ್ತಿ ಸಂಗ್ರಹಿಸಲು ಅರಣ್ಯಕ್ಕೆ ತೆರಳಿದ್ದ ಸ್ಥಳೀಯರು ಭಯಬೀತರಾಗಿದ್ದಾರೆ. ಸುಮಾರು 30 ರಿಂದ 40 ವರ್ಷ ವಯಸ್ಸಿನ ಯುವಕರು ತಂಡದಲ್ಲಿದ್ದರು ಎನ್ನುವ ಸುದ್ದಿ ಕಳೆದ ಮೂರು ದಿನಗಳಿಂದ ಈದು ಗ್ರಾಮದಲ್ಲಿ ಹರಿದಾಡುತ್ತಿದೆ.
ಕಳೆದ 2003ರಲ್ಲಿ ಕಾರ್ಕಳ ತಾಲೂಕಿನ ಈದು ಗ್ರಾಮದ ಬಲ್ಯೊಟ್ಟಿನಲ್ಲಿ ಪಾರ್ವತಿ ಹಾಗೂ ಹಾಜಿಮಾ ಎಂಬ ನಕ್ಸಲರ ಎನ್‌ಕೌಂಟರ್ ನಡೆದ ರಾಜ್ಯದ ಮೊಟ್ಟಮೊದಲ ನಕ್ಸಲ್ ಎನ್‌ಕೌಂಟರ್ ಪ್ರಕರಣವಾಗಿತ್ತು. ಆ ಮೂಲಕ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ರಕ್ತಕ್ರಾಂತಿಯ ಚರಿತ್ರೆ ಆರಂಭವಾಗಿತ್ತು. ಇದೀಗ ಬಲ್ಯೊಟ್ಟಿನಿಂದ ಸುಮಾರು 1 ಕಿ.ಮೀ.ದೂರದಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನುವ ಮಾಹಿತಿಯು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಶುರುವಾಗಿದೆ.
ಕೇರಳದಿಂದ ಕರ್ನಾಟಕದತ್ತ ನಕ್ಸಲರ ವಲಸೆ?
ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ನಕ್ಸಲ್ ಚಟುವಟಿಕೆ ತೀವೃವಾಗುತ್ತಿದ್ದ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ನಕ್ಸಲರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ನಕ್ಸಲ್ ಚಟುವಟಿಕೆಯನ್ನು ಬೇರುಸಹಿತ ಕಿತ್ತೊಗೆಯಲು ನಕ್ಸಲರನ್ನು ಎನ್‌ಕೌಂಟರ್ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕಕ್ಕೆ ನಕ್ಸಲರ ವಲಸೆ ಆರಂಭಗೊAಡಿದೆ ಎನ್ನುವ ಸಂದೇಹಗಳು ವ್ಯಕ್ತವಾಗಿದೆ. ಇದಲ್ಲದೇ ಶಸ್ತçಸಜ್ಜಿತ ನಕ್ಸಲರು ಮಳಯಾಳಿ ಭಾಷೆ ಮಾತನಾಡುತ್ತಿದ್ದರು ಎನ್ನಲಾಗಿದೆ.
2002 ಪಶ್ಚಿಮಘಟ್ಟದ ಶೃಂಗೇರಿ ಸಮೀಪದ ನೆಮ್ಮಾರ್ ಕೊಗ್ರದ ಚೀರಾಮ್ಮ ಎಂಬಾಕೆಯ ಮನೆಯಲ್ಲಿ ಚಿಮ್ಮಿದ ಗುಂಡು ನಕ್ಸಲ್ ಇರುವಿಕೆ ಗೊತ್ತುಪಡಿಸಿತು. ನಕ್ಸಲ್ ಚಟುವಟಿಕೆ ತೀವ್ರಗೊಂಡ ಬೆನ್ನಲ್ಲೇ 2003ರಲ್ಲಿ ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟುನ ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ಠಿಕಾಣಿ ಹೂಡಿದ ನಕ್ಸಲ್ ತಂಡ ಮೇಲೆ ಅಂದಿನ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುರುಗನ್ ಹಾಗೂ ಪೊಲೀಸ್ ಅಧಿಕಾರಿ ಅಶೋಕನ್ 2003 ನವಂಬರ್ 17ರಂದು ಎನ್ ಕೌಂಟರ್ ನಡೆಸಿದ ಪರಿಣಾಮ
ಹಾಜಿಮಾ ಮತ್ತು ಪಾರ್ವತಿ ಬಲಿಯಾಗಿದ್ದರು. ಯಶೋಧ ಗಾಯಗೊಂಡಿದ್ದರು. ದೇವೇಂದ್ರ ಯಾನೇ ವಿಷ್ಣು ಸಹಿತ ಇನ್ನುಳಿದವರು ಪರಾರಿಯಾಗಿದ್ದರು.ಈ ಘಟನೆ ಖಂಡಿಸಿ ಆಂಧ್ರಪ್ರದೇಶದಿAದ ನಕ್ಸಲ್ ಪರ ಹೋರಾಟಗಾರ, ಕವಿ, ಸಾಹಿತಿ,ಚಿಂತಕ ಗದ್ದರ್ ನೇತೃತ್ವದಲ್ಲಿ ಪ್ರಗತಿಪರರು ನಾರಾವಿ ಪರಿಸರದಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಿದ್ದರು. ಅಲ್ಲಿಂದ ಆರಂಭವಾದ ನಕ್ಸಲ್ ಚಟುವಟಿಕೆ ಮುಂದುವರೆದಿದ್ದು, ಬಳಿಕ 2008ರಲ್ಲಿ ಸೀತಾನದಿಯಲ್ಲಿ ಶಿಕ್ಷಕ ಭೋಜ ಶೆಟ್ಟಿಯವರನ್ನು ನಕ್ಸಲರು ಹತ್ಯೆಗೈದರೆ, 2010ರ ಮಾ.1ರಂದು ಅಂಡಾರು ಗ್ರಾಮದ ಮುಟ್ಲುಪಾಡಿ ಸಮೀಪದ ಮೈರೊಳ್ಳಿಯಲ್ಲಿ ನಕ್ಸಲ್ ವಸಂತ ಗೌಡನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಇದಾದ ಬಳಿಕ ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ 2011ರ ಡಿಸೆಂಬರ್ ನಲ್ಲಿ ಹೆಬ್ರಿಯ ತಿಂಗಳೆ ತೆಂಗುಮಾರ್ ಎಂಬಲ್ಲಿ ಈದು ಗುಂಡಿ ಸದಾಶಿವ ಗೌಡರನ್ನು ನಕ್ಸಲರು ಹತ್ಯೆಗೈದಿದ್ದರು. ಈ ಘಟನೆಯ ಬಳಿಕ ಒಂದು ದಶಕದಿಂದ ನಕ್ಸಲ್ ಚಟುವಟಿಕೆ ಬಹುತೇಕ ದುರ್ಬಲವಾಗಿತ್ತು. ಈ ಘಟನೆಯ ಬಳಿಕ ಇದೀಗ ಮತ್ತೆ ಪಶ್ಚಿಮ ಘಟ್ಟದ ತಪ್ಪಲಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.