ಕಾರ್ಕಳ: ಪಿಕಪ್ ಗೂಡ್ಸ್ ಗೆ ಲಾರಿ ಡಿಕ್ಕಿಯಾದ ಪರಿಣಾಮ ಪಿಕಪ್ ನಲ್ಲಿದ್ದ ಸಹಸವಾರ ಗಾಯಗೊಂಡಿದ್ದಾರೆ.
ಕಾಪುವಿನ ಪ್ರಜ್ವಲ್ ಎಂಬವರು ಪಿಕಪ್ ನಲ್ಲಿ ಸಹೋದರ ಪ್ರಥ್ವಿರಾಜ್ ಅವರೊಂದಿಗೆ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ಹೋಗುತ್ತಿದ್ದಾಗ ನಿಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರದ ಬಳಿ ಎದುರಿಂದ ಬಂದ ಲಾರಿಯೊಂದು ಮುಂದಿನಿAದ ಹೋಗುತ್ತಿದ್ದ ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ತೀರಾ ಬಲಬದಿಗೆ ಬಂದು ಪ್ರಜ್ವಲ್ ರವರ ಪಿಕಪ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ ಪಿಕ್ ನಲ್ಲಿದ್ದ ಪ್ರಥ್ವಿರಾಜ್ ಎಂಬವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













