
ಕಾರ್ಕಳ, ಜು.05: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.ಅತ್ತೂರು ದೂಪದಕಟ್ಟೆ ನಿವಾಸಿ ನಾರಾಯಣ ಜೆ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಅವರು ವಿಪರೀತ ಮದ್ಯಪಾನದ ಚಟ ಹೊಂದಿದ್ದು, ಪ್ರತಿದಿನ ರಾತ್ರಿ ಹಾಲ್ ನಲ್ಲಿ ಮಲಗಿ ಮುಂಜಾನೆ ರೂಮಿಗೆ ಹೋಗಿ ಮಲಗುತ್ತಿದ್ದರು. ಪ್ರತಿದಿನದಂತೆ ರಾತ್ರಿ ಹಾಲ್ ನಲ್ಲಿ ಮಲಗಿದ್ದವರು ಇಂದು ಬೆಳಿಗ್ಗೆ ಎದ್ದು ರೂಮ್ ಗೆ ಹೋಗಿದ್ದರು. ಅವರು ಎಷ್ಟು ಸಮಯವಾದರೂ ಕೋಣೆಯಿಂದ ಹೊರಬಾರದ ಕಾರಣ ಪರಿಶೀಲಿಸಿದಾಗ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
