Share this news

ಕಾರ್ಕಳ: ತಾಲೂಕಿನ ನಿಟ್ಟೆಯಲ್ಲಿ ವ್ಯಕ್ತಿಯೊಬ್ಬರು ಎದೆನೋವಿನಿಂದ ಮೃತಪಟ್ಟಿದ್ದಾರೆ.

ನಿಟ್ಟೆಯ ರಮೇಶ ಅವರು ಮೈಸೂರಿನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು , ಅ. 23 ರಂದು ದೀಪಾವಳಿ ಹಬ್ಬಕ್ಕೆಂದು ಮನೆಗೆ ಬಂದಿದ್ದರು. ನ. 02 ರಂದು ರಾತ್ರಿ ಮನೆಯಲ್ಲಿ ತುಳಸಿ ಹಬ್ಬಕ್ಕೆ ಪಟಾಕಿ ಬಿಡುತ್ತಿದ್ದ ವೇಳೆ ಎದೆನೋವು ಬಂದಿದ್ದು ಮನೆಯವರು ಅವರನ್ನು ಉಪಚರಿಸಿ ಮಲಗಿಸಿದ್ದರು. ಆದರೆ ಆ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಆ ವೇಳೆಗಾಗಲೇ ಮೃತಪಟ್ಟಿದ್ದರು.

ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *