ಕಾರ್ಕಳ: ಕಾರ್ಕಳದ ನಿಟ್ಟೆಯ ಗೇರುಬೀಜ ರಪ್ತು ಉದ್ದಿಮೆದಾರರೊಬ್ಬರಿಗೆ ಕಚ್ಚಾ ಗೇರುಬೀಜ ನೀಡುವುದಾಗಿ ಲಕ್ಷಾಂತರ ರೂ. ವಂಚನೆ ಎಸಗಿರುವ ಪ್ರಕರಣ ನಡೆದಿದೆ.
ನಿಟ್ಟೆಯ ಬಿ ಶ್ರೀನಿವಾಸ ಅವರು M/S ಗಾಯತ್ರಿ ಎಕ್ಸ್ ಪೋರ್ಟ್ಸ್, ಗುಂಡ್ಯಡ್ಕ ಅತ್ತೂರು ನಾರ್ತ್, ಇದರ ಮ್ಯಾನೆಜಿಂಗ್ ಪಾರ್ಟನರ್ ಆಗಿದ್ದು ಗೇರು ಬೀಜ ರಪ್ತು ಮಾಡುವ ಉದ್ದಿಮೆ ನಡೆಸುತ್ತಿದ್ದು, ಸಿಂಗಾಪುರದAmari Enterprises, PTE Ltd & Hawkeye Associates PTE Ltd ನ ಪ್ರೊಪೈಟರ್ ಆಗಿರುವ ಬಿಪಿನ್ ಜಾ ಎಂಬಾತನೊAದಿಗೆ 21/06/2023 ರಂದು ಕಚ್ಚಾ ಗೋಡಂಬಿ ಖರೀದಿ ಮಾಡುವ ಬಗ್ಗೆ ಕರಾರು ಪತ್ರ ಮಾಡಿಕೊಂಡಿದ್ದರು.
ಕರಾರಿನಂತೆ 26/06/2023 ರಂದು ಶ್ರೀನಿವಾಸ ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಕಳ ಬ್ರಾಂಚ್ ನಿಂದ 17,08938.88 ರೂ. ಗಳನ್ನು ಬಿಪಿನ್ ಜಾ ಎಂಬಾತನ ಖಾತೆಗೆ ವರ್ಗಾವಣೆ ಮಾಡಿದ್ದು, ಬಳಿಕ ಬಿಪಿನ್ ಜಾ ಈತನು ಕೇರಳ ನಿವಾಸಿ ಸುರೇಶ್ ಎಂಬಾತನ ಜೊತೆ ಸೇರಿಕೊಂಡು ಕರಾರಿನಲ್ಲಿ ಮಾಡಿಕೊಂಡ ಒಪ್ಪಂದAತೆ ಶ್ರೀನಿವಾಸ ಅವರಿಗೆ ಕಚ್ಚಾ ಗೋಡಂಬಿಯನ್ನು ರಫ್ತು ಮಾಡದೇ ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.