ಮಾಳ ಗುರುಕುಲ ಅನುದಾನಿತ ಶಾಲೆಯ ಅಮೃತ ಮಹೋತ್ಸವ: ಗುರುಕುಲ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಜೀವನ ಮೌಲ್ಯ ಮತ್ತು ಸಂಸ್ಕಾರವನ್ನು ನೀಡುತ್ತಿರುವ ಜೊತೆಗೆ ಕನ್ನಡವನ್ನು ಬೆಳೆಸುತ್ತಿರುವುದು ಶ್ಲಾಘನೀಯ: ಶಾಸಕ ಸುನಿಲ್ ಕುಮಾರ್

ಕಾರ್ಕಳ, ಡಿ.28: ಶಿಕ್ಷಣ ಎನ್ನುವುದು ವ್ಯಾಪಾರಿಕರಣವಲ್ಲ ಅದು ಸೇವಾ ಮನೋಭಾವನೆಯ ಪರಿಕಲ್ಪನೆಯಾಗಿದೆ‌. ಶಿಕ್ಷಕರು ಮಕ್ಕಳ ವ್ಯಕ್ತಿತ್ವ ವಿಕಸನದ ರೂವಾರಿಗಳು, ಈ ನಿಟ್ಟಿನಲ್ಲಿ ಮಾಳದ ಗುರುಕುಲ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಜೀವನ ಮೌಲ್ಯ ಮತ್ತು ಸಂಸ್ಕಾರವನ್ನು ನೀಡುತ್ತಿರುವುದು ಮೂಲಕ…

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಪರೂಪದ ಹೃದಯ ಕಾಯಿಲೆಗೆ ಕನಿಷ್ಠ ಗಾಯ ತಂತ್ರವನ್ನು ಬಳಸಿ ಯಶಸ್ವಿ ಚಿಕಿತ್ಸೆ

ಮಣಿಪಾಲ, ಡಿ.27: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ತಂಡವು ಅಪರೂಪದ ಮತ್ತು ಸಂಕೀರ್ಣವಾದ ಹೃದಯ ಕಾಯಿಲೆಯಾದ ರಪ್ಚರ್ಡ್ ಸೈನಸ್ ಆಫ್ ವಲ್ಸಲ್ವಾ ಅನ್ಯೂರಿಸಮ್ ಅನ್ನು ಸುಧಾರಿತ ಕನಿಷ್ಠ ಗಾಯ ವಿಧಾನವನ್ನು ಬಳಸಿಕೊಂಡು ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ. ಇದರಿಂದ ರೋಗಿಯು ಆಸ್ಪತ್ರೆಯಲ್ಲಿ ಹೆಚ್ಚು…

ಕಾರ್ಕಳ: ಬೋರ್ಡ್ ಶುಚಿಗೊಳಿಸುತ್ತಿದ್ದ ಕಾರ್ಮಿಕ ಮಹಡಿಯಿಂದ ಬಿದ್ದು ಗಾಯ

ಕಾರ್ಕಳ, ಡಿ.27: ಕಟ್ಟಡದ ಮೊದಲನೇ ಮಹಡಿಯಲ್ಲಿ ಪೋಸ್ಟ್ ಆಫೀಸ್ ನ ಬೋರ್ಡ್ ಶುಚಿಗೊಳಿಸುತ್ತಿದ್ದ ಕಾರ್ಮಿಕ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆ ನವಲಗುಂದ ದ ಕಾರ್ಮಿಕ ಪ್ರವೀಣ ದೊಡಮನಿ(19ವ) ಗಾಯಗೊಂಡ ಯುವಕ. ಕಾರ್ಕಳದ ಸಾಲ್ಮರದಲ್ಲಿರುವ ಕೆ.ಎಫ್ ಮೊಹಮ್ಮದ್ ಎಂಬವರ ಮಾಲೀಕತ್ವದ…

ಮಾಳ ಗುರುಕುಲ ಅನುದಾನಿತ ಶಾಲೆಯ ಅಮೃತ ಮಹೋತ್ಸವ: ಮಕ್ಕಳಿಗೆ ಉತ್ತಮ ನಡತೆ,ಶಿಸ್ತು, ಸಮಯಪಾಲನೆ,ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಪಾತ್ರ ಮಹತ್ತರವಾಗಿದೆ: ಕರ್ಣಾಟಕ ಬ್ಯಾಂಕ್ ಸಿಇಓ ರಾಘವೇಂದ್ರ ಎಸ್. ಭಟ್

ಕಾರ್ಕಳ, ಡಿ.27: ಇಂದಿನ ವಿಭಕ್ತ ಕುಟುಂಬದಲ್ಲಿ ತಂದೆ,ತಾಯಿ ಇಬ್ಬರೂ ಉದ್ಯೋಗದಲ್ಲಿ ಇರುವುದರಿಂದ ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ತುಂಬಿಸುವ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ ಎಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಎಸ್.ಭಟ್ ಹೇಳಿದರು. ಅವರು ಕಾರ್ಕಳ ತಾಲೂಕಿನ…

ಜೋಡುರಸ್ತೆ : ಕುಸಿದು ಬಿದ್ದು ವ್ಯಕ್ತಿ ಸಾವು

ಕಾರ್ಕಳ, ಡಿ. 26: ತಾಲೂಕಿನ ಕುಕ್ಕುಂದೂರು ನಿವಾಸಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಡಿ.25 ರಂದು ನಡೆದಿದೆ. ಕುಕ್ಕುಂದೂರು ಗ್ರಾಮದ ಜೊಡುರಸ್ತೆ ಅಧಿಧನ್ ಬಿಲ್ಡಿಂಗ್ ನಲ್ಲಿ ವಾಸ ಮಾಡುತ್ತಿದ್ದ ಗುಣೇಂದ್ರ ಪುತ್ರನ್ (61ವ) ಮೃತಪಟ್ಟವರು. ಅವರು ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿಂದ…

ನಿವೃತ್ತ ಶಿಕ್ಷಕ ಅಂಡಾರು ಚಿಕ್ಕಾಡಿ ಕೃಷ್ಣ ಶೆಟ್ಟಿ(72) ನಿಧನ

ಕಾರ್ಕಳ, ಡಿ.26: ಅಂಡಾರು ಗ್ರಾಮದ ಚಿಕ್ಕಾಡಿ ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣ ಶೆಟ್ಟಿ(72) ಶುಕ್ರವಾರ ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೃಷ್ಣ ಶೆಟ್ಟಿಯವರು ಸುಧೀರ್ಘ 32 ವರ್ಷಗಳ ಕಾಲ…

ರಾಜ್ಯದಲ್ಲಿ ಟಿಡಿಎಸ್ ಪಾವತಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು,ಡಿ.26: ರಾಜ್ಯ ಸರ್ಕಾರವು ಕೆಲವು ಇಲಾಖೆಗಳ ಟ್ಯಾಕ್ಸ್ ಡಿಡಕ್ಷೆಡ್ ಅಟ್ ಸೋರ್ಸ್ (ಟಿಡಿಎಸ್) ಪಾವತಿ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.ಸರ್ಕಾರದ ಕೆಲವು ಇಲಾಖೆಗಳಲ್ಲಿ ಟಿಡಿಎಸ್ ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ವಿಳಂಬವಾಗಿ ಪಾವತಿಸುತ್ತಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ.…

ಕಾರ್ಕಳ ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ: ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ,ಡಿ. 26: ಕಾರ್ಕಳ ಭಂಂಡಾರಿ ಸಮಾಜ ಸಂಘ, ಮಹಿಳಾ ಸಂಘ ಹಾಗೂ ಯುವ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ಕಾಬೆಟ್ಟು ವೇಣುಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆ ಸತ್ಯನಾರಾಯಣ ಪೂಜೆ ವೃತ್ತಿ ನಿರತ ಹಿರಿಯರಿಗೆ ಸನ್ಮಾನ ಪ್ರತಿಭಾ ಪುರಸ್ಕಾರ ಮತ್ತು…

ಮಾಜಿ ಪ್ರಧಾನಿ ಅಟಲ್ ಜನ್ಮ ಶತಾಬ್ದಿ ಪ್ರಯುಕ್ತ ಕಾರ್ಕಳ ಬಿಜೆಪಿ ವತಿಯಿಂದ ಅಟಲ್ ಸ್ಮರಣೆ: ದೇಶಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿದ ಅಟಲ್ ವ್ಯಕ್ತಿತ್ವ ಅವಿಸ್ಮರಣೀಯ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್

ಕಾರ್ಕಳ, ಡಿ.26: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ತನ್ನ 55 ವರ್ಷಗಳ ರಾಜಕಾರಣದಲ್ಲಿ ಎಂದಿಗೂ ಅಧಿಕಾರದ ಸ್ವಾರ್ಥ ಇರಲಿಲ್ಲ. ದೇಶಕ್ಕಾಗಿ ತನ್ನ ವೈಯಕ್ತಿಕ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ವ್ಯಕ್ತಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್…

ಮಿಯ್ಯಾರು: ಬೈಕ್ ಗೆ ಜೀಪ್ ಡಿಕ್ಕಿ: ಸವಾರ ಆಸ್ಪತ್ರೆಗೆ ದಾಖಲು

ಕಾರ್ಕಳ, ಡಿ.25: ಬೈಕಿಗೆ ಜೀಪ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಿಯ್ಯಾರು ಗ್ರಾಮದ ಜೋಡುಕಟ್ಟೆ ಬಳಿ ಡಿ.23 ರಂದು ನಡೆದಿದೆ. ಚಂದ್ರಪ್ಪ ಅವರು ಬೈಕಿನಲ್ಲಿ ಬಜಗೋಳಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದಾಗ ಜೋಡುಕಟ್ಟೆ ಬಳಿ ಹಿಂದಿನಿಂದ ವೇಗವಾಗಿ…