ಕಾರ್ಕಳ: ಕಾರ್ಕಳ ಪುರಸಭೆಯ ಸ್ಥಾಯೀ ಸಮಿತಿಯ ಅಧ್ಯಕ್ಷ ಸ್ಥಾನವು ಬಿಜೆಪಿ ಪಾಲಾಗಿದೆ. ನೂತನ ಅಧ್ಯಕ್ಷರಾಗಿ ಆಡಳಿತಾರೂಢ ಬಿಜೆಪಿ ಸದಸ್ಯ ಪ್ರದೀಪ್ ರಾಣೆ ಆಯ್ಕೆಯಾಗಿದ್ದಾರೆ. ಒಟ್ಟು 11 ಸ್ಥಾನಗಳ ಸ್ಥಾಯೀ ಸಮಿತಿಯಲ್ಲಿ 6 ಬಿಜೆಪಿ ಹಾಗೂ 5 ಸದಸ್ಯರು ಆಯ್ಕೆಯಾಗಿದ್ದು, ಬಳಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಬಿಜೆಪಿಯಿಂದ ದಲಿತ ಸಮುದಾಯದ ಪ್ರದೀಪ್ ರಾಣೆ ಹಾಗೂ ಕಾಂಗ್ರೆಸ್ ಪಕ್ಷದಿಂದ ಪ್ರಭಾ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಪ್ರದೀಪ್ 6 ಮತಗಳನ್ನು ಪಡೆದು ಜಯಶಾಲಿಯಾದರೆ, ಪ್ರಭಾ 5 ಮತಗಳನ್ನು ಪಡೆದು ಪರಾಭವನಗೊಂಡರು
