Share this news

ಅಜೆಕಾರು: ಅಜೆಕಾರಿನ ದಾಸಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಹರಿಂದ್ರ ಮತ್ತು ರೇಖಾ ರವರ ಪುತ್ರನಾದ ಕು. ಹೃತ್ವಿಕ್ 2024-25 ನೇ ಸಾಲಿನ ಪ್ರತಿಭಾ ಕಾರಂಜಿಯ ಹಿರಿಯ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಕಾರ್ಕಳ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ಜ. 2 ರಂದು ಕೊಕ್ಕರ್ಣೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾನೆ.

ಸಾಧಕ ವಿದ್ಯಾರ್ಥಿಗೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

 

 

Leave a Reply

Your email address will not be published. Required fields are marked *