Share this news

ಅಜೆಕಾರು: ಲಯನ್ಸ್ ಕ್ಲಬ್ ಮುನಿಯಾಲು, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಮುನಿಯಾಲು, ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ , ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೆರಂಗಡಿ ಮತ್ತು ಯತೀಶ್ ಶೆಟ್ಟಿ ಅಭಿಮಾನಿ ಬಳಗ ದೊಂಡೆರಂಗಡಿ ಇವರ ಆಶ್ರಯದಲ್ಲಿ ದಿ. ಯತೀಶ್ ಶೆಟ್ಟಿ ದೊಂಡೆರಂಗಡಿ ಇವರ 15ನೇ ವರ್ಷದ ಸ್ಮರಣಾರ್ಥ ಬೃಹತ್ ರಕ್ತದಾನ, ಉಚಿತ ಕಣ್ಣಿನ ತಪಾಸಣಾ ಶಿಬಿರ
ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೆರಂಗಡಿಯಲ್ಲಿ ನಡೆಯಿತು.

ಮುನಿಯಾಲು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಭುಜಂಗ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಡಾ.ವೀಣಾ,ಡಾ.ಐಶ್ವರ್ಯ,ಡಾ.ಪ್ರಮೋದ್ ಕುಮಾರ್ ಹೆಗ್ಡೆ, ಯಶಸ್ವಿ ಗೆಳೆಯರ ಬಳಗದ ಅಧ್ಯಕ್ಷ ಅಖಿಲೇಶ್ ಶೆಟ್ಟಿ, ಪಂಚಾಯತ್ ಸದಸ್ಯ ದೀಕ್ಷಿತ್ ಶೆಟ್ಟಿ,ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಭೋಜ ಪೂಜಾರಿ, ಕಡ್ತಲ ಪಂಚಾಯತ್ ಮಾಜಿ ಅಧ್ಯಕ್ಷ ರಾಘವ ದೇವಾಡಿಗ,ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಉದಯ ಶೆಟ್ಟಿ ಮನಿಯಾಲು ಉಪಸ್ಥಿತರಿದ್ದರು.
ಸಭೆಯಲ್ಲಿ ದಿ.ಯತೀಶ್ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ಇತ್ತೀಚಿಗೆ ಅಗಲಿದ ಪಂಚಾಯತ್ ಸದಸ್ಯರಾಗಿದ್ದ ಅರವಿಂದ ಹೆಗ್ಡೆಯವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.ಬೇಬಿ ಎಳ್ಳಾರೆ ಇವರು ಪ್ರಾರ್ಥನೆ ನೆರವೇರಿಸಿ, ಗೋಪಿನಾಥ್ ಭಟ್ ಸ್ವಾಗತಿಸಿದರು. ವಿನಯ ಆರ್ ಭಟ್ ನಿರೂಪಿಸಿ,ವಂದಿಸಿದರು.

ಶಿಬಿರದಲ್ಲಿ 57 ಜನ ರಕ್ತದಾನ ಮಾಡಿದರು.72 ಜನ ಕಣ್ಣಿನ ಪರೀಕ್ಷೆಯನ್ನು ಮಾಡಿಸಿದರು.

 

 

Leave a Reply

Your email address will not be published. Required fields are marked *