ಬೆಂಗಳೂರು: ಕರ್ನಾಟಕದಾದ್ಯಂತ ಇಂದಿನಿಂದ ಭಾರಿ ಮಳೆಯಾಗುವ ಮುನ್ಸೂಚನೆ ದೊರೆತಿದೆ. ಮೇ 30ರವರೆಗೂ ಭಾರಿ ಮಳೆ ಮುಂದುವರೆಯಲಿದೆ. ಮೇ 25ರಿಂದ ಕರಾವಳಿ ಸೇರಿ 6 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ದೊರೆತಿದ್ದು, ರೆಡ್ ಅಲರ್ಟ್ ಘೊಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕ್ಯಾಸಲ್ರಾಕ್,ಕೊಟ್ಟಿಗೆಹಾರ, ಭಾಗಮಂಡಲ, ಬೆಳ್ತಂಗಡಿ, ಮಂಕಿ, ಮಂಗಳೂರು, ಗೇರುಸೊಪ್ಪ, ಕುಂದಾಪುರ, ಮಾಣಿ, ಕುಮಟಾ, ಧರ್ಮಸ್ಥಳ, ಗೋಕರ್ಣ, ಕುಮಟಾ, ಕಳಸ, ಲೋಂಡಾ, ಶೃಂಗೇರಿ, ಯಲ್ಲಾಪುರ, ಹೊನ್ನಾವರ, ಸಿದ್ದಾಪುರ, ಪುತ್ತೂರು, ಮುಲ್ಕಿ, ಮಂಗಳೂರು, ಕಾರವಾರ, ಔರಾದ್, ಖಾನಾಪುರ, ಕೋಟಾ, ಉಪ್ಪಿನಂಗಡಿಯಲ್ಲಿ ಮಳೆಯಾಗಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಹೀಗಾಗಿ ಕರ್ನಾಟಕ, ಗೋವಾ, ಕೇರಳ ಹಾಗೂ ತಮಿಳುನಾಡು ಕರಾವಳಿಗೆ ಮುಂಗಾರು ಏಕಕಾಲಕ್ಕೆ ಪ್ರವೇಶಿಸಿದೆ. ಮುಂದಿನ ನಾಲ್ಕೈದು ದಿನ ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.