ಕಾರ್ಕಳ: ಬೈಂದೂರಿನಲ್ಲಿ ಜನವರಿ 4 ರಂದು ನಡೆದ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಅಜೆಕಾರು ಚರ್ಚ್ ಇಂಗ್ಲಿಷ್ ಮೀಡಿಯಂ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಗಹನವ್ ಬೆಳಿರಾಯ 10 ವರ್ಷದ ಒಳಗಿನ ಕುಮಿಟೇ ವಿಭಾಗದಲ್ಲಿ ಬೆಳ್ಳಿ ಪದಕ , ಮತ್ತು ಕಟಾ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಇವರು ಬೆಳ್ಮಣ್ ಸತೀಶ್ ಅವರಲ್ಲಿ ತರಬೇತಿ ಪಡೆದಿದ್ದು, ಅಜೆಕಾರು ಪ್ರಜ್ಞಾ ಮತ್ತು ಶ್ರೀಪತಿ ಬೆಳಿರಾಯ ರವರ ಪುತ್ರರಾಗಿರುತ್ತಾರೆ.