ಕಾರ್ಕಳ: ಬೈಂದೂರಿನಲ್ಲಿ ಜನವರಿ 5 ರಂದು ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ 12ನೇ ವಯೋಮಿತಿಯ ವಿಭಾಗದಲ್ಲಿ ಪ್ರಾಪ್ತಿ ಎಸ್ ಪೂಜಾರಿ ಅವರು ಭಾಗವಹಿಸಿ ಕುಮುಟೆ ವಿಭಾಗದಲ್ಲಿ ಚಿನ್ನದ ಪದಕ, ಕಟ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ.
ಎಂಟನೇ ವಯೋಮಿತಿಯ ವಿಭಾಗದಲ್ಲಿ ಬೋಳ ಗ್ರಾಮದ ಆಯುಷ್ ಎಸ್ ಪೂಜಾರಿ ಅವರು ಭಾಗವಹಿಸಿ ಕುಮುಟೆ ಮತ್ತು ಕಟದಲ್ಲಿ 2 ಕಂಚಿನ ಪದಕ ಪಡೆದಿರುತ್ತಾರೆ.
ಇವರು ಬೋಳ ಗ್ರಾಮದ ಪುಷ್ಪ ಸತೀಶ್ ಮತ್ತು ಸತೀಶ್ ಪೂಜಾರಿ ದಂಪತಿಗಳ ಮಕ್ಕಳಾಗಿದ್ದು ಶ್ರೀ ಲಕ್ಷ್ಮಿ ಜನಾರ್ಧನ ಇಂಟರ್ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿಗಳು. ಇವರಿಗೆ ಕರಾಟೆ ಶಿಕ್ಷಕರಾದ ಸತೀಶ್ ಬೆಳ್ಮಣ್ ಇವರು ತರಬೇತಿ ನೀಡಿರುತ್ತಾರೆ.