ಕಾರ್ಕಳ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಅಂತರಾಜ್ಯ ಕರಾಟೆ ಸ್ಪರ್ಧೆಯ ಕಟ ವಿಭಾಗದಲ್ಲಿ ಎಳ್ಳಾರೆ ಕೋಟಿಬೆಟ್ಟು ಹರೀಶ್ ಪ್ರಭು & ರೂಪಶ್ರೀ ಪ್ರಭು ಇವರ ಪುತ್ರಿ ಕುಮಾರಿ ಧನ್ವಿತಾ ಪ್ರಭು ಪ್ರಥಮ ಸ್ಥಾನವನ್ನು ಹಾಗೂ ಕುಮಿಟೆ ವಿಭಾಗದಲ್ಲಿ ಎಳ್ಳಾರೆ ಮುಳ್ಕಾಡು ಸತೀಶ್ ಪೂಜಾರಿ ಹಾಗೂ ಶಶಿಕಲಾ ಇವರ ಪುತ್ರಿ ಶರಣ್ಯ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇಬ್ಬರು ವಿದ್ಯಾರ್ಥಿನಿಯರು ಮುಳ್ಕಾಡು ಸರ್ಕಾರಿ.ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿಜಯಲಕ್ಷ್ಮೀ ಮತ್ತು ಸೋಮನಾಥ್ ಇವರಿಂದ ಕರಾಟೆ ತರಬೇತಿಯನ್ನು ಪಡೆದಿದ್ದಾರೆ