ಕಾರ್ಕಳ : ರಾಮಕ್ಷತ್ರಿಯ ಸಂಘ ಕಾರ್ಕಳ ಹಾಗೂ ಶ್ರೀರಾಮ ಚಾರಿಟೇಬಲ್ ಟ್ರಸ್ಟ್(ರಿ) ಸಹಯೋಗದೊಂದಿಗೆ ರಾಮಕ್ಷತ್ರಿಯ ಕ್ರೀಡೋತ್ಸವ-2024 ಕ್ರೀಡಾಕೂಟವು ಕಾರ್ಕಳದ ತಾಲೂಕು ಕ್ರೀಡಾಂಗಣದಲ್ಲಿ ಡಿ. ರಂದು ಭಾನುವಾರ ನಡೆಯಿತು.
ಮುಂಬಯಿ ಹೆಚ್.ಡಿ.ಎಫ್.ಸಿ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಮುಂಬಯಿ ರಾಮರಾಜ ಕ್ಷತ್ರಿಯ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ರಾಜ್ ಕುಮಾರ್ ಕಾರ್ನಾಡ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ಕ್ರೀಡಾಕೂಟದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸಂಘ(ರಿ)ಕಾರ್ಕಳದ ಅಧ್ಯಕ್ಷ ಗುರುಪ್ರಸಾದ್ ರಾವ್ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಎಸ್.ಸೇರ್ವೆಗಾರ್, ನಿವೃತ್ತ ಉಪ ತಹಶಿಲ್ದಾರ್ ವಿಶ್ವನಾಥನ್ ಪಿ,ನಿವೃತ್ತ ಮುಖ್ಯೋಪಾಧ್ಯಾಯ ಪ್ರಭಾಕರ ರಾವ್ ಅಂಡಾರು ಉಪಸ್ಥಿತರಿದ್ದರು. ರಾಮಕ್ಷತ್ರಿಯ ಸಂಘ(ರಿ)ಕಾರ್ಕಳದ ಗೌರವಾಧ್ಯಕ್ಷರಾದ ಪ್ರಸನ್ನ ಕೆ.ಬಿ, ಕಾರ್ಯದರ್ಶಿ ಪ್ರವೀಣ್.ಕೆ ಮತ್ತು ಸಂಕೇತ್.ಎನ್.ರಾವ್. ಬೈಲೂರು ಭಾಗವಹಿಸಿದ್ದರು.
ಮಂಗಳೂರು ಧವಳಾ ಕಾಲೇಜು ಉಪನ್ಯಾಸಕಿ, ಕನ್ನಡ ವಿಭಾಗದ ಮುಖ್ಯಸ್ಥೆ ಮಲ್ಲಿಕಾ ರಾವ್ ಸ್ವಾಗತಿಸಿದರು.
ಸಂಘದ ಜೊತೆ ಕಾರ್ಯದರ್ಶಿ ಪ್ರದೀಪ್.ಕೆ ವಂದಿಸಿದರು. ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ್.ಪಿ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ:
ಸಾಯಂಕಾಲ ನಡೆದ ಸಮಾರೋಪ ಸಮಾರಂಭದ ಅಧಕ್ಷತೆಯನ್ನು ಕಾರ್ಕಳ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ಗುರುಪ್ರಸಾದ್ ರಾವ್ ವಹಿಸಿದ್ದು, ಪಿ.ಶ್ರೀಧರ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಮೂಡಬಿದ್ರೆ ವಲಯ, ದ.ಕ.ಜಿಲ್ಲೆ ಬಹುಮಾನ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಕ್ಲಾಸ್-I ಪಿ.ಡಬ್ಲ್ಯೂ.ಡಿ.ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ,ಉಡುಪಿ ಯುವ ಸಂಘದ ಅಧ್ಯಕ್ಷ ಸತೀಶ್ಚಂದ್ರ ನಾಯಕ್, ಪ್ರಗತಿಪರ ಕೃಷಿಕ ದಿನೇಶ್ ಸೇರ್ವೆಗಾರ್ ಅಂಡಾರು, ನಿವೃತ್ತ ಅಂಚೆಪಾಲಕ ಶಂಕರಾ ರಾವ್ ಬೈಲೂರು ಉಪಸ್ಥಿತರಿದ್ದರು.
ಕಾರ್ಕಳ ರಾಮಕ್ಷತ್ರಿಯ ಸಂಘದ ಗೌರವಾಧ್ಯಕ್ಷರು ಹಾಗೂ ಶ್ರೀರಾಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪಾರ್ಥಸಾರಥಿ, ಸಂಘದ ಜೊತೆ ಕ್ರೀಡಾ ಕಾರ್ಯದರ್ಶಿ ಪ್ರತೀಕ್.ಪಿ ಗೌರವ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಅರುಣಾಕಲಾ ಎಸ್.ರಾವ್ ಮತ್ತು ಪ್ರಣೀತ್.ಪಿ.ರಾವ್ ಅಂಡಾರು ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಸನ್ಮಾನ ಪತ್ರವನ್ನು ಕು.ಸಹನಾ ಶ್ರೀಲಕ್ಷ್ಮೀ ಮತ್ತು ಕು.ಮಾನ್ಯ.ಕೆ.ರಾವ್ ವಾಚಿಸಿದರು.
ವಿಜೇತರ ಪಟ್ಟಿಯನ್ನು ಡಾ.ಸುಮ ಬೈಲೂರು ಓದಿದರು.
ಬಿ. ಮನಮೋಹನ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಮುಡಾರ್ ವಂದಿಸಿದರು.