ಅಜೆಕಾರು: ಕಾಡುಹೊಳೆ ಶ್ರೀ ಗುರು ದತ್ತಾತ್ರೇಯ ಮಂದಿರದಲ್ಲಿ ಡಿಸೆಂಬರ್ 13ರಂದು ದತ್ತ ಜಯಂತಿಯು ನಡೆಯಲಿದೆ.
ಆ ಪ್ರಯುಕ್ತ ಅಂದು ಬೆಳಿಗ್ಗೆ 8 ಗಂಟೆಗೆ ಗಣಹೋಮ ನಡೆಯಲಿದ್ದು, ಸಂಜೆ 6.30 ರಿಂದ ಭಜನಾ ಕಾರ್ಯಕ್ರಮ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆ ತಿಳಿಸಿದೆ.