Share this news

ಸುಳ್ಯ : ಕಡಬದ ಹಳೆ ಸ್ಟೇಷನ್ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಬುಧವಾರ ಬೆಳ್ಳoಬೆಳಗ್ಗೆ ವ್ಯಕ್ತಿಯೊಬ್ಬ ತನ್ನ ಥಾರ್ ಜೀಪಿಗೆ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಹಣ ನೀಡದೆ ಸಿನಿಮಿಯ ಶೈಲಿಯಲ್ಲಿ ಪರಾರಿಯಾದ ಘಟನೆ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ವಂಚನೆಗಳು ಹೆಚ್ಚುತ್ತಿದ್ದು, ವಂಚಕರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೀಗ ಕಡಬ ಮತ್ತು ಸುಳ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ಹೊಸ ರೀತಿಯ ವಂಚನೆ ನಡೆದಿದೆ.

KA01MX9632 ನಂಬರಿನ ಥಾರ್ ಜೀಪ್‌ನ ಚಾಲಕನೊಬ್ಬ, ಬುಧವಾರ ಬೆಳಗ್ಗೆ 6 ಗಂಟೆಗೆ ಕಡಬದ ಹಿಂದೂಸ್ಥಾನ್ ಪೆಟ್ರೋಲ್ ಬಂಕ್‌ಗೆ ಬಂದು ತನ್ನ ವಾಹನಕ್ಕೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡಿದ್ದಾನೆ. ನಂತರ, ಪೆಟ್ರೋಲ್ ಬೇಕೆಂದು ಹೇಳಿ ಬಂಕ್ ಸಿಬ್ಬಂದಿಯನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದ್ದಾನೆ. ಈ ಅವಧಿಯಲ್ಲಿ ಅವನು ಡೀಸೆಲ್ ಹಣ ನೀಡದೆ ಜೀಪ್‌ನಲ್ಲಿ ಎಸ್ಕೇಪ್ ಆಗಿದ್ದಾನೆ.

ಇದೇ ರೀತಿಯ ಘಟನೆ ಡಿಸೆಂಬರ್ 25ರಂದು ಸುಳ್ಯದ ಪೈಚಾರು ಪೆಟ್ರೋಲ್ ಬಂಕ್‌ನಲ್ಲೂ ನಡೆದಿದೆ. ಒಬ್ಬ ವ್ಯಕ್ತಿ ಹಲವು ಕಡೆಗಳಲ್ಲಿ ಇದೇ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಾಹನಗಳು ಎಲ್ಲಿ ಕಂಡುಬಂದರೂ ಕೂಡಲೇ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *