ಕಾರ್ಕಳ :ತಾಲೂಕಿನ ಮುಡಾರು ಮಂಜಲ್ಪಾದೆ ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ ಹಾಗೂ ಮಕ್ಕಳಿಗೆ ದಾನಿಗಳಿಂದ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಮಹಾವೀರ ಹೆಗಡೆ ಪವರ್ ಪಾಯಿಂಟ್, ವಸಂತ್ ರಾವ್ ಮುಡ್ರಾಲು, ಗಣೇಶ್ ಪೂಜಾರಿ ದುಗ್ಗೋಟ್ಟು, ಮಾಸ್ಟರ್ ಸೋಹನ್ ಸೋನಿತ್ ನೇತ್ರಾವತಿ ನಿವಾಸ್ ಅಬ್ಬೇಂಜಾಲು,ಪAಚಾಯತ್ ಸದಸ್ಯ ಸಂತೋಷ್ ಪೂಜಾರಿ, ರಶೀದ್ ನೆಲ್ಲಿಕಾರು ಹಾಗೂ ಸೀತಾ ಮಡಿವಾಳ ಅವರ ಪರವಾಗಿ ಪ್ರಭಾವತಿ ಗರಡಿಗುಡ್ಡೆ ಅವರ ವತಿಯಿಂದ ಕೊಡಮಾಡಿದ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಚೇತನ ಮೂಲ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಮಾಲತಿ ರಮೇಶ್ ನಾಯ್ಕ, ಶೃತಿ ಡಿ ಅತಿಕಾರಿ, ನಾಗರಾಜ್ ಹೆಗ್ಡೆ ಹಲೇಕ್ಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶಾಂಭವಿ, ಎಸ್ ಎಲ್ ಆರ್ ಎಂ ಘಟಕದ ಮೇಲ್ವಿಚಾರಕಿ ಮಾಧವಿ ಪ್ರಭು ಉಪಸ್ಥಿತರಿದ್ದರು.
ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎ ಸುಶ್ಮಿತಾ ಹಾಗೂ ಕಿರಿಯ ಆರೋಗ್ಯ ಸಹಾಯಕಿ ಸುಂದರಿ ಸ್ತನ್ಯಪಾನದ ಮಹತ್ವದ ಮಾಹಿತಿಯನ್ನು ಮಾಹಿತಿಯನ್ನು ನೀಡಿದರು.
ಅಂಗನವಾಡಿ ಸಹಾಯಕಿ ನೇತ್ರಾವತಿ ಪ್ರಾರ್ಥಿಸಿದರು. ಆಶಾ ಕಾರ್ಯಕರ್ತೆ ಸುಮತಿ ವಂದಿಸಿದರು.ಅAಗನವಾಡಿ ಕಾರ್ಯಕರ್ತೆ ಪದ್ಮಾವತಿ ಸ್ವಾಗತಿಸಿ ನಿರೂಪಿಸಿದರು