Month: December 2024

ಉಡುಪಿ ಶ್ರೀಕೃಷ್ಣ ಮಠಕ್ಕೆ ನಟ, ನಿರ್ದೇಶಕ ಉಪೇಂದ್ರ ಭೇಟಿ

ಉಡುಪಿ: ಚಿತ್ರನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರೊಂದಿಗೆ ಉಪೇಂದ್ರ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಉಪೇಂದ್ರ…

ಹುತಾತ್ಮ ಯೋಧ ಅನೂಪ್ ಪೂಜಾರಿ ಮನೆಗೆ ಪ್ರಮೋದ್ ಮಧ್ವರಾಜ್ ಭೇಟಿ

ಉಡುಪಿ : ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಯೋಧ ಕುಂದಾಪುರದ ಅನೂಪ್ ಪೂಜಾರಿಯವರ ಮನೆಗೆ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ರವರು ಭೇಟಿ ನೀಡಿ ದುಃಖದ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸುವುದರೊಂದಿಗೆ, ಭಾರತೀಯ ಸೇನೆಗೆ ಅವರು ನೀಡಿದ ತ್ಯಾಗ ಹಾಗೂ ದೇಶಸೇವೆಗೆ ಗೌರವ…

ಶ್ಯಾಮ್ ಸುಂದರ್ ಅವರಿಗೆ ಮಿಸ್ಟರ್ ಕರ್ನಾಟಕ ಪ್ರಶಸ್ತಿ

ನಿಟ್ಟೆ: ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ಯಾಮ್ ಸುಂದರ್ ಎಂ ಅವರು ಇತ್ತೀಚೆಗೆ ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಮಿಸ್ಟರ್ ಕರ್ನಾಟಕ ಅತ್ಯುತ್ತಮ ದೈಹಿಕ ಸ್ಪರ್ಧೆಯಲ್ಲಿ ಮಾಸ್ಟರ್ಸ್-3 ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ.

ಉಡುಪಿ ಸೆನ್ ಪೋಲೀಸರ ಕಾರ್ಯಾಚರಣೆ : ಕಾರ್ಕಳದ ನೀರೆಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನಾಲ್ವರು ಅರೆಸ್ಟ್

ಉಡುಪಿ : ಕಾರ್ಕಳ ತಾಲೂಕಿನ ನೀರೆ ಸಮೀಪ ಕಾರೊಂದರಲ್ಲಿ ಅಕ್ರಮವಾಗಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಪೊಲೀಸರು ಡಿ.28ರಂದು ಬಂಧಿಸಿದ್ದಾರೆ. ಪ್ರೇಮನಾಥ ಯಾನೆ ಪ್ರೇಮ್, ರೇವುನಾಥ, ಶೈಲೇಶ, ಪ್ರಜ್ವಲ್ ಬಂಧಿತ ಆರೋಪಿಗಳು. ತಮಗೆ ಬಂದಿದ್ದ ಖಚಿತ…

ಸಿಎಂ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ: ನಾಳೆಯ (ಡಿ.31) ಮುಷ್ಕರ ಹಿಂಪಡೆದ ಜಂಟಿ ಕ್ರಿಯಾ ಸಮಿತಿ

ಬೆಂಗಳೂರು: ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ಡಿ. 31 ರಿಂದ ಸಾರಿಗೆ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆ…

ಸಾಗರ: ಖಾಸಗಿ ಬಸ್ ಹಾಗೂ ಕಾರು ಭೀಕರ ಅಪಘಾತ : ಇಬ್ಬರು ಸ್ಥಳದಲ್ಲೇ ಮೃತ್ಯು

ಸಾಗರ: ಖಾಸಗಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ. 29 ರಂದು ಭಾನುವಾರ ಬೆಳ್ಳಂ ಬೆಳಗ್ಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪದ ಮುರುಘಾ ಮಠ ಬಳಿ ಸಂಭವಿಸಿದೆ. ಮೃತರನ್ನ ದೊಡ್ಡಬಳ್ಳಾಪುರದ ಮೂಲದವರು…

ಜನವರಿ ಅಂತ್ಯದೊಳಗೆ ಅಕ್ರಮ ಸಕ್ರಮ ಹಾಗೂ 94ಸಿ ಕಡತ ವಿಲೇವಾರಿಗೊಳಿಸಿ: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

ಬೈಂದೂರು: ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಸರಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಪ್ರಸ್ತುತ ಸಾಗುವಳಿ ಸಕ್ರಮೀಕರಣಕ್ಕೆ ಅರ್ಜಿ ಹಾಕಿದ ರೈತರು ಹಾಗೂ ಸರಕಾರಿ ಜಾಗದಲ್ಲಿ ವಾಸ್ತವ್ಯದ ಉದ್ದೇಶಕ್ಕಾಗಿ ಮನೆ ಕಟ್ಟಿಕೊಂಡ ಬಡವರ ಹಲವಾರು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಈವರೆಗೂ ಹಕ್ಕು…

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿ 6 ಮಂದಿ ವಿರುದ್ಧ ಎಫ್‍ಐಆರ್

ಬೀದರ್: ಗುತ್ತಿಗೆದಾರ ಸಚಿನ್ ಪಾಂಚಾಳ ಎಂಬವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಸೇರಿದಂತೆ 6 ಜನರ ವಿರುದ್ಧ ಕಲಬರುಗಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಬೀದರ್ ನಲ್ಲಿ ರೈಲಿಗೆ ತಲೆಕೊಟ್ಟು ಯುವ ಗುತ್ತಿಗೆದಾರ ಸಚಿನ್ (26) ಎಂಬವರು ಆತ್ಮಹತ್ಯೆ…

ಖ್ಯಾತ ಮದ್ದಳೆ ವಾದಕ ಶಶಿಕುಮಾರ್ ಬೆಳ್ಕಳೆಗೆ ದಿ.ಬೇಳಂಜೆ ತಿಮ್ಮಪ್ಪ ನಾಯ್ಕ್ ಪ್ರಶಸ್ತಿ: ಡಿ.29 ರಂದು ಪ್ರಶಸ್ತಿ ಪ್ರದಾನ

ಉಡುಪಿ: ದುರ್ಗಾಪರಮೇಶ್ವರಿ ಮರಾಠಿ ಸಮುದಾಯ ಕಲಾಸಂಘ ಹಾಗೂ ಬೇಳಂಜೆ ತಿಮ್ಮಪ್ಪ ನಾಯ್ಕ್ ಪ್ರಶಸ್ತಿ ಸಮಿತಿ ವತಿಯಿಂದ ಕೊಡಮಾಡುವ ದಿ.ಬೇಳಂಜೆ ತಿಮ್ಮಪ್ಪ ನಾಯ್ಕ್ ಪ್ರಶಸ್ತಿಗೆ ಸಾಲಿಗ್ರಾಮ ಮೇಳದ ಖ್ಯಾತ ಮದ್ದಳೆವಾದಕ ಶಶಿಕುಮಾರ್ ಬೆಳ್ಕಳೆ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿ.29 ರಂದು…

ಕಾರ್ಕಳ: ಹಾಡುಹಗಲೇ ಚಿನ್ನಾಭರಣ ಅಂಗಡಿಯಿಂದ ಆಭರಣ ಕಳವು

ಕಾರ್ಕಳ: ಕಾರ್ಕಳದ ಜ್ಯುವೆಲ್ಲರಿ ಶಾಪ್ ಒಂದರಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಯ ಮಾಲೀಕರು ಇರುವ ಸಂದರ್ಭದಲ್ಲಿಯೇ ಚಿನ್ನದ ಆಭರಣಗಳನ್ನು ಎಗರಿಸಿದ ಘಟನೆ ಡಿ.27 ರಂದು ನಡೆದಿದೆ. ಕಾರ್ಕಳ ಮುಖ್ಯರಸ್ತೆಯಲ್ಲಿರುವ ಪ್ರಣವ್ ಜ್ಯುವೆಲ್ಲರಿ ಎಂಬ ಆಭರಣದ ಅಂಗಡಿಗೆ ಬಂದ ಖದೀಮ ಚಿನ್ನದ ಕಿವಿಯೋಲೆ…