Month: December 2024

ಕಾರ್ಕಳ ತಾಲೂಕು ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಕಾರ್ಕಳ: ಕಾರ್ಕಳ ತಾಲೂಕು ಕೃಷಿಕ ಸಮಾಜದ ಸಭೆಯು ಹಂಗಾಮಿ ಅಧ್ಯಕ್ಷರಾದ ಅಂತೋನಿ ಡಿಸೋಜರ ಅಧ್ಯಕ್ಷತೆಯಲ್ಲಿ ಕಾರ್ಕಳ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಜರುಗಿತು. ಮುಂದಿನ ಅವಧಿಗಾಗಿ ಈ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನುಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನವೀನ್‌ಚಂದ್ರ ಜೈನ್, ಉಪಾಧ್ಯಕ್ಷರಾಗಿ ಮೋಹನದಾಸ…

ಕಾರ್ಕಳ: ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದವರ ಮೇಲೆ ಹಲ್ಲೆ, ಜಾತಿ ನಿಂದನೆ, ಜೀವ ಬೆದರಿಕೆ

ಕಾರ್ಕಳ: ಸೆಂಟ್ರಿಂಗ್‌ ಕೆಲಸ ಆಡುತ್ತಿದ್ದ ವೇಳೆ ಕೆಲಸಗಾರರ ಜೊತೆ ಜಗಳ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಾರ್ಕಳ ತಾಲೂಕಿನ ಇರ್ವತ್ತೂರಿನಲ್ಲಿ ಡಿ.30 ರಂದು ನಡೆದಿದೆ. ಪರಿಶಿಷ್ಟ ಜಾತಿಗೆ…

ಉಡುಪಿ : ಕಾರಿನಲ್ಲಿ ಎಂಡಿಎಂಎ ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್: ರೂ. 20,11,900 ಮೌಲ್ಯದ ಎಂಡಿಎಂಎ ಸೇರಿದಂತೆ ಇತರೆ ಸೊತ್ತುಗಳು ವಶಕ್ಕೆ

ಉಡುಪಿ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂ ಡಿ ಎಂ ಎ ಪೌಡರ್ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೇ ಬ್ರಿಡ್ಜ್ ಬಳಿ ಬಂಧಿಸಿದ್ದಾರೆ. ಕಟಪಾಡಿ ಕೋಟೆ ಗ್ರಾಮದ ಅಕ್ಬರ್ (32), ಹಾಗೂ ಉಚ್ಚಿಲದ ಮುಕ್ದುಮ್…

ಸರ್ಕಾರ ನಕ್ಸಲರ ಶರಣಾಗತಿಗೆ ಪ್ರೋತ್ಸಾಹ ನೀಡುತ್ತಿದೆ: ಹಿಂಸಾಚಾರ ಬಿಟ್ಟು ಶಾಂತಿಯುತ ಪರಿಹಾರಕ್ಕಾಗಿ ಸಿಎಂ ಸಿದ್ದರಾಮಯ್ಯ ಮನವಿ

ಬೆಂಗಳೂರು: ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿರುವವರು ಶರಣಾಗಿ ಮುಖ್ಯವಾಹಿನಿಗೆ ಬರಬೇಕೆಂದು ಸರ್ಕಾರವು ಬಯಸುತ್ತದೆ. ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮುಂದಾದರೆ ಶರಣಾಗತಿ ಕುರಿತು ಈಗಾಗಲೇ ರೂಪಿಸಿರುವ ನೀತಿಯನ್ನು ಸರಳೀಕರಣಗೊಳಿಸಿ, ಸಮಪರ್ಕವಾಗಿ ಜಾರಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮ…

ಕಾರ್ಕಳದ ಜ್ಯುವೆಲ್ಲರಿಯಲ್ಲಿ ಕಳ್ಳತನ ಪ್ರಕರಣ: ಇರಾನಿ ಗ್ಯಾಂಗ್ ನ ಕುಖ್ಯಾತ ದರೋಡೆಕೋರ ಮೊಹಮ್ಮದ್ ಆಲಿಖಾನ್ ಇರಾನಿ ಬಂಧನ

ಕಾರ್ಕಳ : ಕಾರ್ಕಳದ ಜ್ಯುವೆಲ್ಲರಿ ಶಾಪ್ ಒಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಕಾರ್ಕಳ ನಗರ ಠಾಣಾ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಡಿ.27 ರಂದು ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಮಾರ್ಗ ಬಳಿ ಇರುವ ಪ್ರಕಾಶ್ ಎಂಬವರ…

ಕಾರ್ಕಳ: ಒಟಿಪಿ ಮೂಲಕ ರೂ.50,000 ಕ್ಕೂ ಅಧಿಕ ನಗದು ದೋಚಿದ ಸೈಬರ್ ವಂಚಕರು

ಕಾರ್ಕಳ: ಮೊಬೈಲಿಗೆ ಎಸ್‌ಎಂಎಸ್ ಮೂಲಕ ಒಟಿಪಿ ಕಳುಹಿಸಿ ಖಾತೆಯಿಂದ ಸಾವಿರಾರು ರೂ. ಎಗರಿಸಿ ವಂಚನೆಗೈದಿರುವ ಪ್ರಕರಣ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ನಿವಾಸಿ ಸುರಕ್ಷಾ ಹಣ ಕಳೆದುಕೊಂಡವರು. ಸುರಕ್ಷಾ ಅವರ ಮೊಬೈಲಿಗೆ ಡಿ.29 ರಂದು ಒಂದು…

ಹೊಸ ವರ್ಷಾಚರಣೆಯ ವೇಳೆ ರಾಜ್ಯಾದ್ಯಂತ ತುರ್ತು ಸ್ಪಂದನೆಗೆ ಆರೋಗ್ಯ ಕವಚ 108 ಸರ್ವಸನ್ನದ್ದ

ಕಾರ್ಕಳ:ಹೊಸ ವರ್ಷಚಾರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಪ್ರಾಣಹಾನಿ ತಡೆಯುವ ನಿಟ್ಟಿನಲ್ಲಿ ಡಿ.31ರಂದು ರಾತ್ರಿಯಿಡೀ 108 ತುರ್ತು ಆರೋಗ್ಯ ಕವಚ ಅಂಬುಲೆನ್ಸ್ ಕರ್ನಾಟಕ ರಾಜ್ಯಾದ್ಯಂತ ಸನ್ನದ್ಧವಾಗಲಿದೆ. ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆ ಸಂದರ್ಭಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ…

ಉಡುಪಿ: ಎಳ್ಳಮಾವಾಸ್ಯೆ ಹಿನ್ನಲೆ ಸಮುದ್ರ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲು

ಉಡುಪಿ: ಅಮವಾಸ್ಯೆಯ ದಿನದಂದು ಸಮುದ್ರಕ್ಕೆ ಸ್ನಾನ ಮಾಡಲು ತೆರಳಿದ ಇಬ್ಬರು ಸಮುದ್ರಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಸಮುದ್ರ ತೀರದಲ್ಲಿ ನಡೆದಿದೆ. ಎಳ್ಳಮಾವಾಸ್ಯೆ ಪ್ರಯುಕ್ತ ಹೆಜಮಾಡಿ ಸಮುದ್ರಕ್ಕೆ ತೀರ್ಥ ಸ್ನಾನ ಮಾಡಲೆಂದು ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು,…

ಮಣಿಪಾಲ : ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಹಗ್ಗ ತುಂಡಾಗಿ ಬಿದ್ದು ಸಾವು

ಉಡುಪಿ: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬರು ನೇಣುಕುಣಿಕೆ ತುಂಡಾಗಿ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ 80 ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮೆಲ್ರಾಯ್ (55ವ) ಎಂದು ಗುರುತಿಸಲಾಗಿದೆ. ಮನೆಯ ಮೊದಲ‌ ಅಂತಸ್ತಿನ ಮೇಲ್ಛಾವಣೆಯ ಕಬ್ಬಿಣದ ಅಡ್ಡಪಟ್ಟಿಗೆ ನೇಣು ಬಿಗಿದು…

ಸಹಕಾರ ಭಾರತಿ ನೂತನ ರಾಜ್ಯಾಧ್ಯಕ್ಷ ಪ್ರಭುದೇವ ಆರ್ ಮಾಗನೂರ್ ಗೆ ಸನ್ಮಾನ

ಉಡುಪಿ: ಸಹಕಾರ ಭಾರತಿಯ ನೂತನ ರಾಜ್ಯಾಧ್ಯಕ್ಷ ಪ್ರಭುದೇವ ಆರ್ ಮಾಗನೂರ್ ಅವರು ಡಿ.28 ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿದರು. ಉಡುಪಿಯ ವಾಸುಕಿ ಟವರ್ಸ್ ನ ಕಿಸಾನ್ ಸಭಾ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರಭುದೇವ…