ಕಾರ್ಕಳ: ಕಾರ್ಕಳ ತಾಲೂಕು ಕೃಷಿಕ ಸಮಾಜದ ಸಭೆಯು ಹಂಗಾಮಿ ಅಧ್ಯಕ್ಷರಾದ ಅಂತೋನಿ ಡಿಸೋಜರ ಅಧ್ಯಕ್ಷತೆಯಲ್ಲಿ ಕಾರ್ಕಳ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಜರುಗಿತು.
ಮುಂದಿನ ಅವಧಿಗಾಗಿ ಈ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನುಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ನವೀನ್‌ಚಂದ್ರ ಜೈನ್, ಉಪಾಧ್ಯಕ್ಷರಾಗಿ ಮೋಹನದಾಸ ಅಡ್ಯಂತಾಯ, ಪ್ರಧಾನ ಕಾರ್ಯದರ್ಶಿಯಾಗಿ ಗೋವಿಂದ ರಾಜ್ ಭಟ್, ಖಜಾಂಚಿಯಾಗಿ ಹರೀಶ್ ಕುಮಾರ್ ಕಲ್ಯಾ ಮತ್ತು ಜಿಲ್ಲಾ ಪ್ರತಿನಿಧಿಯಾಗಿ ರಘುಚಂದ್ರ ಜೈನ್ ಇರ್ವತ್ತೂರು ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಪದಾಧಿಕಾರಿಗಳ ಘೋಷಣೆಯನ್ನು ಹಂಗಾಮಿ ಅದ್ಯಕ್ಷರು ನೆರವೇರಿಸಿದರು. ಚುನಾವಣಾಧಿಕಾರಿಗಳಾಗಿ ಕಾರ್ಕಳ ತಾಲೂಕು ಸಹಾಯಕ ಕೃಷಿ ನಿರ್ದೇಶರಾದ ಗೋವಿಂದ ನಾಯ್ಕ್ ಉಪಸ್ಥಿತರಿದ್ದರು.