Share this news

ಕಾರ್ಕಳ: ಯಕ್ಷಗಾನ ಕಲೆಗಾಗಿ , ಕಲಾವಿದರಿಗಾಗಿ ಕಳೆದ ಹನ್ನೆರಡು ವರ್ಷಗಳ ಹಿಂದೆ ಸಮಾನ ಮನಸ್ಕರಿಂದ ಹುಟ್ಟಿಕೊಂಡ ಕಾರ್ಕಳ ಯಕ್ಷಕಲಾರಂಗದ ಹದಿಮೂರನೇ ವರ್ಷದ ಕಿಶೋರ ಯಕ್ಷೋತ್ಸವವು ಜ. 4 ಮತ್ತು 5 ರಂದು ಪೆರ್ವಾಜೆ ಹೈಸ್ಕೂಲ್ ವಠಾರದಲ್ಲಿ 14 ಶಾಲೆಗಳ ವಿದ್ಯಾರ್ಥಿಗಳಿಂದ ದಿನಪೂರ್ತಿ ನಡೆಯಲಿದೆ.

ಜ.4 ರಂದು ಸಂಸ್ಥೆಯ ಅದ್ಯಕ್ಷರಾದ ವಿಜಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಕಳದ ವಿಶ್ರಾಂತ ಲೆಕ್ಕಪರಿ ಪರಿಶೋದಕರಾದ ಸಿ.ಎ. ಕಮಲಾಕ್ಷ ಕಾಮತ್ ಯಕ್ಷೋತ್ಸವವನ್ನು ಉದ್ಘಾಟಿಸಲಿದ್ದಾರೆ. ಕಲಾಪೋಷಕ ವೇ.ಮೂ.ನಾರಾಯಣ ಭಟ್ ಕಾರ್ಯಕ್ರಮಕ್ಕೆ ಶುಭಾಸಂಸನೆಗೈಯಲಿದ್ದಾರೆ.
ಪ್ರಧಾನ ಅತಿಥಿಗಳಾಗಿ ಯಕ್ಷಧ್ರುವ ಯಕ್ಷಶಿಕ್ಷಣದ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ ಮತ್ತು ಡಾ. ಜ್ಞಾನೇಶ್ ಕಾಮತ್, ಎಲ್. ಐ .ಸಿ ಯ ನಿವೃತ್ತ ಅಧಿಕಾರಿ ಕಿಶೋರ್ ಕುಮಾರ್ ಶೆಟ್ಟಿ, ಪೆರ್ವಾಜೆ ಪ್ರೌಢ ಶಾಲೆಯ ಮುಖ್ಯ ಅಧ್ಯಾಪಕರಾದ ದಿವಾಕರ್, ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷ ಆನಂದ್ರಾಯ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿರುವರು.

ಎರಡು ದಿನಗಳಲ್ಲಿ ಹದಿನಾಲ್ಕು ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಜ.5 ಸಂಜೆ ಸಮಾರೋಪ ಸಮಾರಂಭ ಜರಗಲಿದೆ .ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ನ ಸ್ಥಾಪಕಾದ್ಯಕ್ಷರಾದ ಪಟ್ಲಗುತ್ತು ಸತೀಶ್ ಶೆಟ್ಟಿ ಅಧ್ಯಕ್ಷv ವಹಿಸಲಿದ್ದು, ಕಾರ್ಕಳ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಬಜಗೋಳಿಯ ಡಾ. ವೆಂಕಟಗಿರಿ ರಾವ್, ವೇ. ಮೂ ಅರಣ್ ಭಟ್, ಹಾಗೂ ಗೋವಾ ತುಳು ಕೂಟದ ಅದ್ಯಕ್ಷ ಭಕ್ತವತ್ಸಲ ಗಣೇಶ್ ಶೆಟ್ಟಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಉಚಿತವಾಗಿ ಯಕ್ಷ ಶಿಕ್ಷಣ ಪಡೆಯುತ್ತಾ ಶಾಲಾ ಕಾಲೇಜು ವ್ಯಾಸಂಗದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೊ. ಎಂ ರಾಮಚಂದ್ರ ಸ್ಮರಣಾರ್ಥ ಮತ್ತು ಪ್ರೊ. ಎಸ್ ಆರ್ ಮಲ್ಲಿಯವರ ಸ್ಮರಣಾರ್ಥ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಸಂಸ್ಥೆಯ ಅದ್ಯಕ್ಷರಾದ ವಿಜಯ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *