ಕಾರ್ಕಳ: ಮೊಬೈಲಿಗೆ ಎಸ್‌ಎಂಎಸ್ ಮೂಲಕ ಒಟಿಪಿ ಕಳುಹಿಸಿ ಖಾತೆಯಿಂದ ಸಾವಿರಾರು ರೂ. ಎಗರಿಸಿ ವಂಚನೆಗೈದಿರುವ ಪ್ರಕರಣ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ನಿವಾಸಿ ಸುರಕ್ಷಾ ಹಣ ಕಳೆದುಕೊಂಡವರು.
ಸುರಕ್ಷಾ ಅವರ ಮೊಬೈಲಿಗೆ ಡಿ.29 ರಂದು ಒಂದು ಒಟಿಪಿ ಬಂದಿದ್ದು, ನಂತರ ಅಪರಿಚಿತ ನಂಬರಿನಿAದ ಕರೆಯೂ ಬಂದಿತ್ತು. ಸುರಕ್ಷಾ ಅವರು ಕರೆ ಸ್ವೀಕರಿಸಿದಾಗ ಅತ್ತಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅವರು ಕರೆ ಕಟ್ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ಸುರಕ್ಷಾ ಅವರ ಮೊಬೈಲ್‌ಗೆ ಅವರ ಕೆನರಾ ಬ್ಯಾಂಕ್ ತೆಳ್ಳಾರು ಬ್ರಾಂಚ್ ನಲ್ಲಿ ಹೊಂದಿರುವ ಬ್ಯಾಂಕ್ ಖಾತೆಯಿಂದ 67,000/- ಕಡಿತಗೊಂಡ ಬಗ್ಗೆ ಸಂದೇಶ ಬಂದಿದ್ದು, ಬಳಿಕ ಮಧ್ಯಾಹ್ನ ಮತ್ತೆ ಖಾತೆಯಿಂದ 500/- ರೂಪಾಯಿ ಕಡಿತಗೊಂಡ ಬಗ್ಗೆ ಸಂದೇಶ ಬಂದಿದ್ದು, ಸೈಬರ್ ವಂಚಕರು ಒಟ್ಟು 67,500/- ರೂ. ಗಳನ್ನು ವರ್ಗಾಯಿಸಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.