ಕಾರ್ಕಳ : ಕಾರ್ಕಳದ ಜ್ಯುವೆಲ್ಲರಿ ಶಾಪ್ ಒಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಕಾರ್ಕಳ ನಗರ ಠಾಣಾ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಡಿ.27 ರಂದು ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಮಾರ್ಗ ಬಳಿ ಇರುವ ಪ್ರಕಾಶ್ ಎಂಬವರ ಪ್ರಣವ್ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕನ ಸೋಗಿನಲ್ಲಿ ಬಂದಿದ್ದ ಆರೋಪಿ ಆಭರಣಗಳನ್ನು ಕಳವುಗೈದು ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಯ ಬೆನ್ನತ್ತಿ ಧಾರವಾಡದ ಇರಾನಿ ಕಾಲೋನಿಯ ಮೊಹಮ್ಮದ್ ಆಲಿ ಖಾನ್ ಇರಾನಿ@ ಅವ್ನಿ ಇರಾನಿ@ ಮೋಹಮದ ಎಂಬಾತನ್ನು ಬಂಧಿಸಿ, ಬಂದಿತನಿಂದ ಸುಮಾರು 1,78,000 ರೂ.ಮೌಲ್ಯದ 26 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ ನಿರ್ದೇಶನದಂತೆ ಕಾರ್ಯಾಚರಣೆಯಲ್ಲಿ ಸಿದ್ದಲಿಂಗಪ್ಪ ಎಸ್. ಟಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಪರಮೇಶ್ವರ ಹೆಗಡೆ,ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ರವರ ಉಸ್ತುವಾರಿಯಲ್ಲಿ ಹಾಗೂ ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಅರವಿಂದ ಕಲಗುಜ್ಜಿರವರ ಮಾರ್ಗದರ್ಶನ ದಲ್ಲಿ ಸಿಪಿಐ ಮಂಜಪ್ಪ ನೇತೃತ್ವದಲ್ಲಿ ಕಾರ್ಕಳ ನಗರ ಠಾಣಾ ಪಿಎಸ್ಐ ಗಳಾದ ಸಂದೀಪ್ ಕುಮಾರ್ ಶೆಟ್ಟಿ, ಶಿವಕುಮಾರ್ ಹಾಗೂ ಸಿಬ್ಬಂದಿಗಳಾದ ಗೋಪಾಲ್, ಸಂತೋಷ್, ಶ್ರೀನಿವಾಸ್, ಸದಾನಂದ, ದರ್ಶನ್ ಪಾಲ್ಗೊಂಡಿದ್ದರು.