ಕಾರ್ಕಳ: ಕಾರ್ಕಳದ ಜ್ಯುವೆಲ್ಲರಿ ಶಾಪ್ ಒಂದರಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಯ ಮಾಲೀಕರು ಇರುವ ಸಂದರ್ಭದಲ್ಲಿಯೇ ಚಿನ್ನದ ಆಭರಣಗಳನ್ನು ಎಗರಿಸಿದ ಘಟನೆ ಡಿ.27 ರಂದು ನಡೆದಿದೆ.
ಕಾರ್ಕಳ ಮುಖ್ಯರಸ್ತೆಯಲ್ಲಿರುವ ಪ್ರಣವ್ ಜ್ಯುವೆಲ್ಲರಿ ಎಂಬ ಆಭರಣದ ಅಂಗಡಿಗೆ ಬಂದ ಖದೀಮ ಚಿನ್ನದ ಕಿವಿಯೋಲೆ ತೋರಿಸುವಂತೆ ಕೇಳಿದ್ದ. ಆಗ ಶಾಪ್‌ನಲ್ಲಿದ್ದ ರೇಣುಕಾ ಅವರು ಗಂಡ ಬರುತ್ತಾರೆ ಅರ್ಧ ಗಂಟೆ ಬಿಟ್ಟು ಬನ್ನಿ ಎಂದಿದ್ದರು. ಆದರೂ ಆರೋಪಿ ಅಂಗಡಿಯಲ್ಲಿಯೇ ಸ್ವಲ್ಪ ಹೊತ್ತು ನಿಂತಿದ್ದು, ಬಳಿಕ ಬೆಳ್ಳಿಯ ಉಂಗುರವನ್ನು ತೋರಿಸುವಂತೆ ಕೇಳಿದ್ದಾನೆ. ಅದರಂತೆ ರೇಣುಕಾ ಅವರು ಬೆಳ್ಳಿಯ ಉಂಗುರವನ್ನು ತೋರಿಸುತ್ತಿದ್ದಾಗ ಖದೀಮ ಅಂಗಡಿಯ ಶೋಕೇಸ್ ಗ್ಲಾಸ್ ಮೇಲೆ ಇಟ್ಟಿದ್ದ ಕಿವಿಯ ಜುಮುಕಿ -3 ಜೊತೆ, ಚಿನ್ನದ ಉಂಗುರ-3 ಇದ್ದ ಪೊಟ್ಟಣವನ್ನು ಕಳ್ಳತನ ಮಾಡಿ ಪರಾರಿಯಗಿದ್ದಾನೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.