ಕಾರ್ಕಳ: ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ತೆಗೆದು ಸಾಗಿಸಲು ಯತ್ನಿಸಿದ್ದ ಮರಳನ್ನು ಕಾರ್ಕಳ ನಗರ ಠಾಣಾ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕಸಬಾ ಗ್ರಾಮದ ಕಾವೇರಡ್ಕ ಬಳಿಯ ಸ್ವರ್ಣ ನದಿಯಲ್ಲಿ ಡಿ.26 ರಂದು ಪ್ರಸಾದ್ ನಾಯ್ಕ್, ಮಂಜು ಹಾಗೂ ಇನ್ನೋರ್ವ ವ್ಯಕ್ತಿ ಸೇರಿಕೊಂಡು ಅಕ್ರಮವಾಗಿ ಮರಳು ತೆಗೆದಿದ್ದು, ಅದನ್ನು ಟಿಪ್ಪರ್ ಲಾರಿಯಲ್ಲಿ ಸಾಗಿಸಲು ಮುಂದಾಗಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಮರಳನ್ನು ವಶಪಡಿಸಿಕೊಂಡಿದ್ದಾರೆ.
ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕಾರ್ಕಳ ನಗರ ಠಾಣಾ ಎಎಸ್‌ಐ ಜಯಂತ್ ಮತ್ತವರ ತಂಡ 1-4 ಯೂನಿಟ್ ಮರಳು ಹಾಗೂ ಮರಳು ತೆಗೆಯಲು ಬಳಸಿದ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.