ಮಂಗಳೂರು : ಗೋವನ್ನು ಕತ್ತರಿಸಿ ಮಾಂಸ ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಗೋಮಾಂಸ ಸಹಿತ ತಡೆದ ಬಜರಂಗದಳ ಕಾರ್ಯಕರ್ತರು ಆರೋಪಿಗಳನ್ನು ಬಜಪೆ ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುಪುರ ಕೈಕಂಬದ ವಿಕಾಸ್ ನಗರದಲ್ಲಿ ಡಿ.26 ಗುರುವಾರ ನಡೆದಿದೆ.ಇಬ್ಬರು ಆರೋಪಿಗಳ ಪೈಕಿ ವಾಹನ ಚಾಲಕ ಕುಪ್ಪೆಪದವು ಅಂದೇಲ್ ನಿವಾಸಿ ಅಜೀಜ್ ಎಂದು ತಿಳಿದು ಬಂದಿದ್ದು, ಈತ ಹಿಂದೆಯೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಇಬ್ಬರು ಮುಸ್ಲಿಂ ವ್ಯಕ್ತಿಗಳು ಟೆಂಪೋ ವಾಹನದಲ್ಲಿ ಗೋಮಾಂಸವನ್ನು ತುಂಬಿಸಿ ಸಾಗಾಟ ಮಾಡುತ್ತಿರುವ ವಿಚಾರ ತಿಳಿದ ಸ್ಥಳೀಯ ಬಜರಂಗದಳ ಕಾರ್ಯಕರ್ತರು ವಾಹನವನ್ನು ತಡೆದಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಬಜಪೆ ಪೊಲೀಸರು ವಾಹನ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರು ಗೋಮಾಂಸವನ್ನು ಮಾಂಸದ ಅಂಗಡಿಗಳಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದು ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.