ಉಡುಪಿ: ದುರ್ಗಾಪರಮೇಶ್ವರಿ ಮರಾಠಿ ಸಮುದಾಯ ಕಲಾಸಂಘ ಹಾಗೂ ಬೇಳಂಜೆ ತಿಮ್ಮಪ್ಪ ನಾಯ್ಕ್ ಪ್ರಶಸ್ತಿ ಸಮಿತಿ ವತಿಯಿಂದ ಕೊಡಮಾಡುವ ದಿ.ಬೇಳಂಜೆ ತಿಮ್ಮಪ್ಪ ನಾಯ್ಕ್ ಪ್ರಶಸ್ತಿಗೆ ಸಾಲಿಗ್ರಾಮ ಮೇಳದ ಖ್ಯಾತ ಮದ್ದಳೆವಾದಕ ಶಶಿಕುಮಾರ್ ಬೆಳ್ಕಳೆ ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಡಿ.29 ರಂದು ಭಾನುವಾರ ಹಿರಿಯಡ್ಕ ದುರ್ಗಾಪರಮೇಶ್ವರಿ ಮರಾಠಿ ಸಮುದಾಯ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮರಾಟಿ ಸಂಘ ಬೆಂಗಳೂರು ಇದರ ಅಧ್ಯಕ್ಷೆ ಹಾಗೂ CSIR-NAL ಮುಖ್ಯ ವಿಜ್ಞಾನಿ ಶೋಭಾವತಿ ಎಂ.ಟಿ, ನಿವೃತ್ತ ಜಿಲ್ಲಾ ಸರ್ಜನ್ ಡಾ.ಆನಂದ ನಾಯ್ಕ್, ಮಣಿಪಾಲ MIT ಪ್ರಾಧ್ಯಾಪಕ ಎಸ್.ವಿ ಉದಯಕುಮಾರ್ ಶೆಟ್ಟಿ,ಯಕ್ಷಗಾನ ಕಲಾವಿದ ಬೇಳಂಜೆ ಮಹಾಬಲ ನಾಯ್ಕ್ ಮುಂತಾದವರು ಉಪಸ್ಥಿತರಿರಲಿದ್ದಾರೆ