ಕಾರ್ಕಳ:ಭಾರತದ ಆರ್ಥಿಕ ಕ್ಷೇತ್ರದ ಕ್ರಾಂತಿಯ ಹರಿಕಾರ ವಿಶ್ವಮಾನ್ಯ ಆರ್ಥಿಕ ಹಾಗೂ ಶಿಕ್ಷಣ ತಜ್ಞ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನದಿಂದ ದೇಶವು ಒಬ್ಬ ಮಹಾ ಅಭಿವೃದ್ದಿಯ ಹರಿಕಾರನನ್ನು ಕಳಕೊಂಡಂತಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ಹೇಳಿದ್ದಾರೆ.
ಮನಮೋಹನ್ ಸಿಂಗ್ ದೇಶದ ಸಮಾಜವಾದಿ ಅರ್ಥ ವ್ಯವಸ್ಥೆಯ ಚಿಂತಕರಲ್ಲಿ ಒಬ್ಬರಾಗಿದ್ದರು. ಉದಾರ ಆರ್ಥಿಕ ನೀತಿ, ವಿದೇಶಿ ನೇರ ಬಂಡವಾಳ ಹೂಡಿಕೆ, ಒಂದು ಹಂತದ ತೆರಿಗೆ ಆಮದು ಸುಂಕ ವಿನಾಯತಿಯೇ ಮೊದಲಾದ ಅಭಿವದ್ದಿಪರ ಕಾರ್ಯಕ್ರಮಗಳ ಮೂಲಕ ದೇಶದ ಆರ್ಥಿಕತೆಗೆ ಬಂಡವಾಳಶಾಹಿ ಆಯಾಮ ನೀಡಿದ್ದರು. ಇದು ದೇಶದಲ್ಲಿ ಒಂದು ಹಂತದ ಕೈಗಾರಿಕಾ ಕ್ರಾಂತಿಗೆ ಕಾರಣವಾಗಿತ್ತು ಎಂದು ಬಣ್ಣಿಸಿದ್ದಾರೆ.
ಆರ್ಥಿಕ ಉದಾರೀಕರಣ ನೀತಿಯಿಂದ ಆಮದು ತೆರಿಗೆ ಕಡಿತಗೊಂಡ ಪರಿಣಾಮವಾಗಿ ಮುಖ್ಯವಾಗಿ ಅದಾಗಲೇ ನೆಲಕಚ್ಚಿದ್ದ ಕರಾವಳಿ ಕರ್ನಾಟಕದ ಗೇರುಬೀಜ ಉದ್ದಿಮೆ ಮತ್ತೆ ಅಭವೃದ್ದಿ ಹೊಂದುವಂತಾಗಿದೆ,ಇದೀಗ ಅವರ ನಿಧನದಿಂದ ದೇಶವು ಮಹಾನ್ ಮುತ್ಸದ್ಧಿಯನ್ನು ಕಳೆದುಕೊಂಡಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.