Month: May 2026

ರಾಜ್ಯ ಸರ್ಕಾರ ಯಶಸ್ವೀ ಮೂರು ವರ್ಷ ಪೂರೈಸಿರುವುದು ಜನಪರ ಆಡಳಿತಕ್ಕೆ ಸಾಕ್ಷಿ: ಉದಯ ಶೆಟ್ಟಿ ಮುನಿಯಾಲು

ಕಾರ್ಕಳ, ಮೇ.20: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಯಶಸ್ವಿಯಾಗಿ ಮೂರನೇ ವರ್ಷ ಪೂರೈಸಿರುವುದು ರಾಜ್ಯದ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ…

ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ,ನಿಂದನೆ ಆರೋಪ : ಎಂಎಲ್‌ಸಿ ಹೆಚ್ ವಿಶ್ವನಾಥ್ ವಿರುದ್ಧ ಪ್ರಕರಣ ದಾಖಲು

ಮೈಸೂರು,ಮೇ.20: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್ ಅವರು ಕೋಲಾರ ಅಥವಾ ಮೈಸೂರು ಭಾಗದ ಪ್ರಭಾವಿ ರಾಜಕಾರಣಿಯಾಗಿರುವ ಎಚ್. ವಿಶ್ವನಾಥ್ ತಮಗೆ…

ಬೋಳ: ಅಕ್ರಮ ಮರಳು ಗಣಿಗಾರಿಕೆ ಮೇಲೆ ಪೊಲೀಸರ ದಾಳಿ: 40 ಸಾವಿರ ಮೌಲ್ಯದ 5 ಲೋಡ್ ಮರಳು ಸೀಜ್

ಕಾರ್ಕಳ, ಮೇ.18: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಪೊಲೀಸರು ಈ ಚಟುವಟಕೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಕಾರ್ಕಳ ತಾಲೂಕಿನ ಬೋಳ ಗ್ರಾಮದ ಇಚ್ಚೋಡಿ ಎಂಬಲ್ಲಿ ಶಾಂಭವಿ ನದಿಯಲ್ಲಿ ಜಯರಾಮ ಸಾಲ್ಯಾನ್ ಎಂಬವರು ಸರ್ಕಾರಕ್ಕೆ ರಾಜಧನ ಪಾವತಿಸದೇ ಅಕ್ರಮವಾಗಿ ಮರಳು…

ಆನ್ ಲೈನ್ ಮೂಲಕ ಔಷಧಿ ಮಾರಾಟ ಖಂಡಿಸಿ ನಾಳೆ ಬೆಂಗಳೂರು ಸೇರಿ ರಾಜ್ಯಾದ್ಯಂತ 26 ಸಾವಿರ ಮೆಡಿಕಲ್ ಶಾಪ್ ಬಂದ್ ಸಾಧ್ಯತೆ: ರೀಟೇಲ್ ಫಾರ್ಮಸಿ ಸಂಘಟನೆಗಳು ಈ ಬಂದ್‌ನಲ್ಲಿ ಭಾಗವಹಿಸದಿರಲು ನಿರ್ಧಾರ

ಬೆಂಗಳೂರು,ಮೇ.18:ಆನ್‌ಲೈನ್ ಇ-ಫಾರ್ಮಸಿ ಮಾರಾಟದ ವಿರುದ್ಧ ಅಖಿಲ ಭಾರತ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರು ಸೇರಿ ರಾಜ್ಯಾದ್ಯಂತ ಮೆಡಿಕಲ್ ಶಾಪ್ ಬಂದ್ ಆಗಲಿವೆ. ಈ ಮುಷ್ಕರದಿಂದ ರೋಗಿಗಳು ಔಷಧಕ್ಕಾಗಿ ಪರದಾಡುವ ಸಾಧ್ಯತೆಯಿದ್ದು,ನಿಯಮಿತವಾಗಿ ಔಷಧಿ…

ಬೆಲೆ ಏರಿಕೆಗೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರೇ ನೇರ ಹೊಣೆ : ರಾಜ್ಯ ಸರ್ಕಾರದ 3 ನೇ ವರ್ಷದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ತುಮಕೂರು,ಮೇ.18 : ದೇಶದಲ್ಲಿ ಇಂದು ಗ್ಯಾಸ್‌, ಪೆಟ್ರೋಲ್, ಡೀಸೆಲ್‌ ದರ ಗಗನಕ್ಕೇರಿದ್ದು,ಇದರಿಂದಾಗಿ ಬಡವರ ಜೀವನ ದುಸ್ತರವಾಗಿದೆ,ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು. ಅವರು ತುಮಕೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಆಡಳಿತಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ…

ಪೆಟ್ರೋಲ್ – ಡೀಸೆಲ್ ಬೆಲೆ ಮತ್ತೆ 90 ಪೈಸೆ ಹೆಚ್ಚಳ : ಗ್ರಾಹಕರಿಗೆ ಭಾರಿ ಬೆಲೆ ಏರಿಕೆ ಬಿಸಿ

ಬೆಂಗಳೂರು, ಮೇ.19: ತೈಲ ಕಂಪೆನಿಗಳು ದೇಶಾದ್ಯಂತ ಮೇ 15 ರಂದು ಪೆಟ್ರೋಲ್ – ಡೀಸೆಲ್ ಬೆಲೆ 3 ರೂಪಾಯಿ ಏರಿಕೆ ಮಾಡಿದ ಬೆನ್ನಲ್ಲೇ ಮತ್ತೆ ಇಂದಿನಿಂದ 90 ಪೈಸೆ ಹೆಚ್ಚಳ ಮಾಡಿದೆ. ಕೆಲವೇ ದಿನಗಳ ಅಂತರದಲ್ಲಿ ಎರಡೆರಡು ಬಾರಿ ಬೆಲೆಏರಿಕೆ ಆಗಿದ್ದು,…

ಮಿಯ್ಯಾರು:ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮದ್ಯವ್ಯಸನಿ ಚಿಕಿತ್ಸೆ ಫಲಿಸದೇ ಮೃತ್ಯು

ಕಾರ್ಕಳ,ಮೇ.18: ವಿಪರೀತ ಮದ್ಯಪಾನ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಕಲ್ಲುಕೋರೆ ಕಾರ್ಮಿಕ ಮಣಿ(36) ಎಂಬವರು ಮೃತಪಟ್ಟ ಕಾರ್ಮಿಕ. ಮಣಿ ಮಿಯ್ಯಾರಿನ ಕಲ್ಲುಕೋರೆಯಲ್ಲಿ…

ಹಿಂದೂ ಬಡ ಮಹಿಳೆಗೆ ಮುಸ್ಲಿಂ ಮಹಿಳೆಯರಿಂದ ನೆರವು ಕೇಳಿದ ಪ್ರಕರಣ: ಅಸಹಾಯಕ ವೃದ್ಧ ಮಹಿಳೆ ಹಾಗೂ ಸಹಾಯಕ್ಕೆ ಮನವಿ ಮಾಡಿದ ಮಹಿಳೆ ತಾಯಿ -ಮಗಳು: ಬಿಜೆಪಿಯ ಟ್ರೋಲ್ ಗೆ ಪೇಚಿಗೆ ಸಿಲುಕಿದ ಸಚಿವೆ ಹೆಬ್ಬಾಳ್ಕರ್

ಉಡುಪಿ, ಮೇ.18: ಅಸಹಾಯಕ ಸ್ಥಿತಿಯಲ್ಲಿದ್ದ ಹಿಂದೂ ಮಹಿಳೆಗೆ ಮುಸ್ಲಿಂ ಮಹಿಳೆಯರು ನೆರವು ಕೋರಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಳಿ ಕರೆತಂದು ಈ ಪ್ರಕರಣದ ಅಸಲಿಯತ್ತು ಬಹಿರಂಗವಾಗಿದೆ. ಅಸಲಿಗೆ ಬಡ ಹಿಂದೂ ಮಹಿಳೆ ಗಿರಿಜಾ ಶೆಟ್ಟಿಗಾರ್‌ ಅವರಿಗೆ…

ಹೊಸ್ಮಾರು: ಜಾಂಡೀಸ್ ನಿಂದ ಬಳಲುತ್ತಿದ್ದ ವ್ಯಕ್ತಿ ಮೃತ್ಯು

ಕಾರ್ಕಳ, ಮೇ.18:ಕಳೆದ 3 ತಿಂಗಳಿನಿಂದ ಜಾಂಡೀಸ್ ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಹೊಸ್ಮಾರು ಈದು ಗ್ರಾಮದ ಹರೀಶ್ ಮೂಲ್ಯ(40ವ) ಮೃತಪಟ್ಟವರು. ಕೊಣಾಜೆಯ ಚಿಕನ್ ಸೆಂಟರ್ ಒಂದರಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ಅವರು ಕಳೆದ 3 ತಿಂಗಳಿನಿಂದ ಜಾಂಡೀಸ್ ಕಾಯಿಲೆಯಿಂದ…

ಕಾರ್ಕಳ: ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ಕಾರ್ಕಳ,ಮೇ.18: ಕೃಷಿ ತೋಟಕ್ಕೆ ನೀರು ಬಿಡಲು ಹೋಗಿದ್ದ ವೇಳೆ ಕಾಲುಜಾರಿ ಬಾವಿಗೆ ಬಿದ್ದು ಕೃಷಿಕ ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕು ಬೋಳ ಗ್ರಾಮದ ಬಿಟ್ಟಿಂಗೇರಿ ಎಂಬಲ್ಲಿ ಭಾನುವಾರ (ಮೇ. 17) ನಡೆದಿದೆ. ಬಿಟ್ಟಿಂಗೇರಿಯ ಅಜಿತ್ ಪ್ರಸಾದ್ ಹೆಗ್ಡೆ(73) ಎಂಬವರು ಭಾನುವಾರ ಬೆಳಗ್ಗೆ…