Share this news

ಕಾರ್ಕಳ: ಮುಂಬಯಿಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ಮುಂಡ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ರಮೇಶ ಸಪಳಿಗ (68) ಎಂಬವರ ಮೃತದೇಹ ಇಂದು ಬೆಳಗ್ಗೆ ಮುಂಡ್ಕೂರಿನ ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ.

ಮುಂಬಯಿಯಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ರಮೇಶ್ ಸಪಳಿಗ ಅವರು ಸಹೋದರ ಅನಾರೋಗ್ಯ ಪೀಡಿತರಾದ ಹಿನ್ನಲೆಯಲ್ಲಿ ಮುಂಡ್ಕೂರಿಗೆ ಬಂದವರು ಮುಂಬಯಿಗೆ ವಾಪಾಸಾಗಿರಲಿಲ್ಲ. ಅಲ್ಲದೆ ವಿಪರೀತ ಮದ್ಯಪಾನದ ಚಟ ಹೊಂದಿದ್ದರು.

ಕಳೆದ ಮಾ.29ರಂದು ರಾತ್ರಿ 9 ಗಂಟೆಗೆ ಮದ್ಯಪಾನ ಮಾಡಲೆಂದು ಮನೆಯಿಂದ ಮುಂಡ್ಕೂರಿಗೆ ಹೋದವರು ವಾಪಸು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯಿರುವ ನಾಗಬನದ ಹತ್ತಿರ ಶಾಂಭವಿ ನದಿಯಲ್ಲಿ ರಮೇಶ್ ಅಪಳಿಗ ಅವರ ಮೃತದೇಹ ಪತ್ತೆಯಾಗಿದೆ. ವಿಪರೀತ ಮದ್ಯಪಾನದ ಚಟ ಹೊಂದಿದ್ದ ಅವರು ಮದ್ಯಪಾನ ಮಾಡಿ ಬರುತ್ತಿದ್ದವ ವೇಳೆ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ರಮೇಶ ಸಪಳಿಗ ಅವರ ಪುತ್ರ ಯೋಗೀಶ್ ಸಪಳಿಗ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *